ಉಚ್ಚಿಲ: ಎಸ್‌ಡಿಪಿಐಯಿಂದ ಕುಡಿಯುವ ನೀರು ಪೂರೈಕೆ
Update: 2021-03-19 20:47 IST
ಕಾಪು, ಮಾ.19: ಎಸ್‌ಡಿಪಿಐ ಉಚ್ಚಿಲ ಪಂಚಾಯತ್ ಸಮಿತಿ ವತಿಯಿಂದ ಬಡಾ ಗ್ರಾಪಂನ 3ನೇ ವಾರ್ಡ್‌ನ ಗ್ರಾಮಸ್ಥರಿಗೆ ಉಚಿತವಾಗಿ ಕುಡಿಯುವ ನೀರು ಸರಬರಾಜು ಮಾಡಲಾಯಿತು.
ಕಳೆದ ಕೆಲ ದಿನಗಳಿಂದ 3ನೇ ವಾರ್ಡಿಗೆ ನೀರು ಸರಬರಾಜು ಮಾಡುವ ಪಂಪ್ ಕೆಟ್ಟು ಹೋಗಿದ್ದು ಈ ಭಾಗದ ಗ್ರಾಮಸ್ಥರು ಕುಡಿಯುವ ನೀರಿಗಾಗಿ ಪರದಾಡುತ್ತಿದ್ದರು. ಈ ಸಮಸ್ಯೆಯನ್ನು ಅರಿತ 4ನೇ ವಾರ್ಡಿನ ಸದಸ್ಯ ಆಸೀಫ್ ವೈ.ಸಿ. ನೇತೃತ್ವದಲ್ಲಿ ಉಚ್ಚಿಲ ಎಸ್‌ಡಿಪಿಐ ಪಂಚಾಯತ್ ಸಮಿತಿ ಸದಸ್ಯರು ಟ್ಯಾಂಕರ್ ಮೂಲ ನೀರನ್ನು ಸರಬರಾಜು ಮಾಡಿದರು.
ಈ ಸಂದರ್ಭದಲ್ಲಿ ಖಲೀಲ್ ಉಚ್ಚಿಲ, ಮಜೀದ್ ಪೊಲ್ಯ, ನೂರ್ ನವಾಝ್, ಬದ್ರುದ್ದೀನ್ ಉಪಸ್ಥಿತರಿದ್ದರು.