ಮಂಗಳೂರು-ಕಾರವಾರ ಮಾರ್ಗದಲ್ಲಿ ವೊಲ್ವೊ ಬಸ್ ಕಾರ್ಯಾರಂಭ
Update: 2021-03-19 21:39 IST
ಮಂಗಳೂರು, ಮಾ.19: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಿಂದ ಮಂಗಳೂರಿನಿಂದ ಕಾರವಾರ ಮಾರ್ಗದಲ್ಲಿ ವೊಲ್ವೊ ವಾಹನವನ್ನು ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಗುರುವಾರದಿಂದಲೇ ಕಾರ್ಯಾಚರಣೆ ಆರಂಭಿಸಿದೆ.
ಸಾರಿಗೆಯು ಮಂಗಳೂರು ಸ್ಟೇಟ್‌ಬ್ಯಾಂಕ್‌ನಿಂದ ಸಂಜೆ 4:15ಕ್ಕೆ ಹೊರಟು ಉಡುಪಿ, ಕುಂದಾಪುರ, ಭಟ್ಕಳ, ಹೊನ್ನಾವರ, ಕುಮಟ, ಅಂಕೋಲ ಮಾರ್ಗವಾಗಿ ರಾತ್ರಿ 9:15ಕ್ಕೆ ಕಾರವಾರ ತಲುಪಲಿದೆ. ಕಾರವಾರದಿಂದ ಮುಂಜಾನೆ 6:45ಕ್ಕೆ ಹೊರಟು ವಾಪಸ್ ಅದೇ ಮಾರ್ಗವಾಗಿ ಬೆಳಗ್ಗೆ 11:45ಕ್ಕೆ ಮಂಗಳೂರು ತಲುಪಲಿದೆ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.