ಉದ್ದಬೆಟ್ಟು ಮಲ್ಲೂರು ನವೀಕೃತ ಮದ್ರಸ ಉದ್ಘಾಟನೆ
ಮಂಗಳೂರು, ಮಾ.19: ಉದ್ದಬೆಟ್ಟು ಮಲ್ಲೂರಿನ ಸೈಯದ್ ಹಸನ್ ಹೈದ್ರೋಸ್ ಜುಮ್ಮಾ ಮಸೀದಿ ಇದರ ಅಧೀನದ ನವೀಕೃತ ಮದ್ರಸದ ಉದ್ಘಾಟನೆಯು ಗುರುವಾರ ನಡೆಯಿತು.
ಸೈಯದ್ ಅಲಿ ತಂಙಳ್ ಕುಂಬೋಳ್ ಮದ್ರಸ ಉದ್ಘಾಟಿಸಿ ದುಆಗೈದರು. ಈ ಸಂದರ್ಭ ಮಲ್ಲೂರು ಗ್ರಾಪಂ ಅಧ್ಯಕ್ಷ ಇಸ್ಮಾಯಿಲ್ ಎಂ.ಇ. ಬೊಲ್ಲಂಕಿನಿ ಅವರನ್ನು ಸನ್ಮಾನಿಸಲಾಯಿತು.
ಮಸೀದಿಯ ಅಧ್ಯಕ್ಷ ಬಿ. ನಿಝಾಮುದ್ದೀನ್ ಮಾತನಾಡಿ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡುವ ವ್ಯವಸ್ಥೆ ಮಾಡಲಾಗಿದೆ. ಹೊಸದಾಗಿ ನಿರ್ಮಿಸಿದ ಮದ್ರಸ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ಹವಾನಿಯಂತ್ರಿತ ವ್ಯವಸ್ಥೆ ಒದಗಿಸಲಾಗಿದೆ. ಶಿಕ್ಷಣಕ್ಕೆ ಪ್ರೇರಣೆ ಕೊಡುವುದು ನಮ್ಮ ಗುರಿಯಾಗಿದೆ ಎಂದು ಹೇಳಿದರು.
ಸೈಯದ್ ಮುಹಮ್ಮದ್ ಅಕ್ರಂ ಅಲಿ ತಂಙಳ್‌ರ ನೇತೃತ್ವದಲ್ಲಿ ಸ್ವಲಾತ್ ವಾರ್ಷಿಕ ನಡೆಯಿತು. ಕಾರ್ಯಕ್ರಮದಲ್ಲಿ ಅಬ್ದುಲ್ ರಝಾಕ್, ಬಿಜೆಎಂ ದೆಮ್ಮೆಲೆ ಖತೀಬ್ ಸಲೀಂ ಅರ್ಶದಿ, ಬದ್ರಿಯಾ ನಗರ ಮಸೀದಿಯ ಖತೀಬ್ ಅಹ್ಮದ್ ದಾರಿಮಿ, ಭಾಷಾ ತಂಙಳ್, ಆಡಿಟರ್ ಅಬ್ದುಲ್ ಸತ್ತಾರ್, ಮಲ್ಲೂರು ಗ್ರಾಪಂ ಸದಸ್ಯ ಇಲ್ಯಾಸ್ ಪಾದೆ, ಬದ್ರಿಯಾ ನಗರ ಮಸೀದಿಯ ಅಧ್ಯಕ್ಷ ಅಸ್ರಾರುದ್ದೀನ್, ದೆಮ್ಮೆಲೆ ಮಸೀದಿಯ ಅಧ್ಯಕ್ಷ ಮುಹಮ್ಮದ್ ಶರೀಫ್, ಎಸ್‌ಕೆಐಎಂ ವಿಬಿ ಮುಫತ್ತಿಷ್ ಕೆ.ಎಂ.ಉಮರ್ ದಾರಿಮಿ, ಎಂಐಎಚ್‌ಎಸ್‌ಎಂ ಅಧ್ಯಕ್ಷ ಎಂ.ಐ. ಶರೀಫ್, ಎಸ್‌ಎಚ್‌ಐಎಂ ಅಧ್ಯಕ್ಷ ನಿಝಾಮುದ್ದೀನ್, ಪ್ರಧಾನ ಕಾರ್ಯದರ್ಶಿ ಉಮ್ಮರ್ ಫಾರೂಕ್ ಬೊಲ್ಲಂಕಿನಿ, ಕೋಶಾಧಿಕಾರಿ ಉಸ್ಮಾನ್ ಎಂ.ಎಸ್ , ಕಾರ್ಯದರ್ಶಿ ಇಸ್ಮಾಯಿಲ್ ಬೊಲ್ಲಂಕಿನಿ, ಉಪಾಧ್ಯಕ್ಷ ತಮೀಮುದ್ದೀನ್ ಬೊಲ್ಲಂಕಿನಿ, ಮುಹಮ್ಮದ್ ಉಸ್ಮಾನ್ ನಿಝಾಮಿ ಉದ್ದಬೆಟ್ಟು, ಅಬ್ದುಲ್ ಅಲಿ ಮದನಿ ಉದ್ದಬೆಟ್ಟು, ಮುಹಮ್ಮದ್ ಯು, ಮುಹಮ್ಮದ್ ಎಂ.ಇ., ಗಫ್ಫಾರ್ ಎಂ.ವೈ, ಅಬೂಬಕ್ಕರ್ ಬೊಲ್ಲಂಕಿನಿ ಉಪಸ್ಥಿತರಿದ್ದರು.