ಚುಸಾಪ ಸಾಹಿತ್ಯ ಸಂಪುಟ ಬಿಡುಗಡೆ
Update: 2021-03-19 21:48 IST
ಮಂಗಳೂರು, ಮಾ.19: ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ ಬಳಗದ ಸದಸ್ಯರ ಫೆಬ್ರವರಿ ತಿಂಗಳ ಬರಹಗಳಿರುವ ಚುಸಾಪ ಸಾಹಿತ್ಯ ಸಂಪುಟ ಸಾಂಕೇತಿಕ ಕೃತಿಯನ್ನು ಕವಿಕಾವ್ಯ ಸಮ್ಮೋಹನ ಕವಿ ಸಮ್ಮೇಳನದಲ್ಲಿ ಸಾಹಿತಿ ಯಶವಂತ ಡಿ.ಎಸ್. ಬಿಡುಗಡೆಗೊಳಿಸಿದರು.
ಈ ಸಂದರ್ಭ ಕವಿ ಕಾವ್ಯ ಸಮ್ಮೋಹನ ಸಮ್ಮೇಳನದ ಅಧ್ಯಕ್ಷ ಡಾ.ಸುರೇಶ್ ನೆಗಳಗುಳಿ, ಪರಿಷತ್ತಿನ ಜಿಲ್ಲಾ ಗೌರವಾಧ್ಯಕ್ಷ ಇರಾ ನೇಮು ಪೂಜಾರಿ, ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕಾ.ವೀ.ಕೃಷ್ಣದಾಸ್, ಪುತ್ತೂರು ಸಾಹಿತ್ಯ ವೇದಿಕೆಯ ಅಧ್ಯಕ್ಷ ಗೋಪಾಲಕೃಷ್ಣ ಕಟ್ಟತ್ತಿ, ಛಾಯಾಗ್ರಾಹಕ ಅಪುಲ್ ಆಳ್ವ ಇರಾ, ಮಂಗಳೂರು ಚುಸಾಪದ ಕೋಶಾಧಿಕಾರಿ ಲತೀಶ್ ಎಂ. ಸಂಕೊಳಿಗೆ ಉಪಸ್ಥಿತರಿದ್ದರು.