ಕಡಬ: ರಸ್ತೆ ಅಪಘಾತ; ಮೂವರಿಗೆ ಗಂಭೀರ ಗಾಯ

Update: 2021-03-20 05:17 GMT

ಕಡಬ, ಮಾ.20:  ರಸ್ತೆ ಅಪಘಾತದಲ್ಲಿ ಮೂವರು ಗಂಭೀರ ಗಾಯಗೊಂಡ ಘಟನೆ ಮಂಗಳೂರು - ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಉಪ್ಪಿನಂಗಡಿ ಸಮೀಪದ ಕಾಂಚನ ಎಂಬಲ್ಲಿ ಶನಿವಾರ ಸಂಭವಿಸಿದೆ.

ಕಾಂಚನ ಕ್ರಾಸ್ ಬಳಿಯ ಸಣ್ಣಂಪಾಡಿ ಎಂಬಲ್ಲಿ ಹ್ಯುಂಡೈ ಐ20 ಕಾರು ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಬೈಕಿಗೆ ಢಿಕ್ಕಿ ಹೊಡೆದಿದ್ದು, ಬೈಕಿನಲ್ಲಿದ್ದ ಮೂವರು ಗಂಭೀರ ಗಾಯಗೊಂಡಿದ್ದಾರೆ. 

ಗಾಯಾಳು ಮಡಂತ್ಯಾರು ಮೂಲದವರೆಂದು ತಿಳಿದುಬಂದಿದ್ದು, ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News