ಭಟ್ಕಳ ನಗರಠಾಣೆ ಪಿಎಸ್‌ಐ ಯಾಗಿ ಸುಮಾ ಬಿ. ಅಧಿಕಾರ ಸ್ವೀಕಾರ
Update: 2021-03-20 15:25 IST
ಭಟ್ಕಳ: ಇಲ್ಲಿನ ನಗರ ಠಾಣೆಯ ನೂತನ ಪಿ.ಎಸ್.ಐ ಯಾಗಿ ಚಿಕ್ಕಮಗಳೂರು ಮೂಲದ ಸುಮಾ ಬಿ. ಅಧಿಕಾರ ವಹಿಸಿಕೊಂಡರು.
ಪಿ.ಎಸ್.ಐ ಆಗಿ ಕಾರ್ಯನಿರ್ವಹಿಸುತ್ತಿದ್ದ ಭರತ್ ಅವರ ವರ್ಗಾವಣೆಯಾಗಿರುವ ಹಿನ್ನೆಯಲ್ಲಿ ತೆರವಾಗಿರುವ ಸ್ಥಾನಕ್ಕೆ ಸುಮಾ ಬಿ. ಅವರನ್ನು ನೇಮಕಗೊಳಿಸಿ ಸರ್ಕಾರ ಆದೇಶ ನೀಡಿದೆ. ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನಲ್ಲಿ ಪಿ.ಎಸ್.ಐ ಯಾಗಿ ಇವರು ಈ ಹಿಂದೆ ಕಾರ್ಯನಿರ್ವಹಿದ್ದಾರೆ.
ಭಟ್ಕಳದ ಸಾರ್ವಜನಿಕರು ಇಲ್ಲಿನ ಕಾನೂನು ಸುವಸ್ಥೆ ಕಾಪಾಡಿಕೊಂಡು ಹೋಗುವಲ್ಲಿ ಸಹಕರಿಸಬೇಕೆಂದು ಅವರು ವಿನಂತಿಸಿಕೊಂಡಿದ್ದಾರೆ.