ಕಾಪು: ನಂದಿನಿ ಕ್ಷೀರ ಮಳಿಗೆ ಉದ್ಘಾಟನೆ
ಕಾಪು, ಮಾ. 20: ಕರ್ನಾಟಕ ಸರಕಾರದ ಡಾ.ಬಿ.ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅನುದಾನದೊಂದಿಗೆ ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ವತಿಯಿಂದ ಕಾಪುವಿನ ಕೋತಲಕಟ್ಟೆಯ ಬಬ್ಬುಸ್ವಾಮಿ ದೈವಸ್ಥಾನದ ಬಳಿ ಸಮೃದ್ಧಿ ಯೋಜನೆಯಡಿ ನಂದಿನಿ ಕ್ಷೀರ ಮಳಿಗೆಯನ್ನು ಶನಿವಾರ ಪ್ರಾರಂಭಿಸಲಾಯಿತು.
ಈ ನಂದಿನಿ ಕ್ಷೀರ ಮಳಿಗೆಯನ್ನು ಉದ್ಘಾಟಿಸಿದ ಒಕ್ಕೂಟದ ಅಧಕ್ಷ ರವಿರಾಜ ಹೆಗ್ಡೆ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ವತಿಯಿಂದ ಈ ಯೋಜನೆ ಉಡುಪಿ ಜಿಲ್ಲೆಯಲ್ಲಿ ಪ್ರಪ್ರಥಮ ಬಾರಿಗೆ ಉದ್ಘಾಟನೆಗೊಂಡಿದ್ದು, ನಿರುದ್ಯೋಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಉದ್ಯೋಗಾಂಕ್ಷಿಗಳಿಗೆ ಉತ್ತಮ ಯೋಜನೆಯಾಗಿದೆ. ಮುಂದಿನ ದಿನಗಳಲ್ಲಿ ಉಡುಪಿ ಜಿಲ್ಲೆಯಾದ್ಯಾಂತ ಇನ್ನೂ ಇಂಥ ಹಲವಾರು ಪಾರ್ಲರ್‌ಗಳನ್ನು ನಿರ್ಮಿಸಲಾಗುವುದು ಎಂದರು.
ಒಕ್ಕೂಟದ ನಿರ್ದೇಶಕ ಹಾಗೂ ಕರ್ನಾಟಕ ರಾಜ್ಯ ಹಾಲು ಮಹಾಮಂಡಳಿ ಬೆಂಗಳೂರು ಇದರ ನಿರ್ದೇಶಕ ಕಾಪು ದಿವಾಕರ್ ಶೆಟ್ಟಿ ಮಾತ ನಾಡಿ, ನಂದಿನಿ ಹಾಲು ಯಾವುದೇ ಕಬೆರಕೆ ಇಲ್ಲದ ಉತ್ತಮ ರೀತಿಯ ಪರಿಶುದ್ದ ಹಾಲಾಗಿದ್ದು, ಹಾಲಿನ ಸೇವನೆಯು ಆರೋಗ್ಯಕ್ಕೆ ಉತ್ತಮ ವಾದ ಒಂದು ಆಹಾರವಾಗಿದೆ. ನಂದಿನಿಯಲ್ಲಿ ಒಟ್ಟು 130 ಹಾಲಿನ ಉತ್ಪನ್ನಗಳಿರುವುದಾಗಿ ತಿಳಿಸಿ, ಈ ಉತ್ಪನ್ನಗಳನ್ನು ಗ್ರಾಹಕರಿಗೆ ನಿರಂತರವಾಗಿ ಒದಗಿಸುವ ದೃಷ್ಟಿಯಿಂದ ಪಾರ್ಲರ್ ಪ್ರಾರಂಭಿಸಿರುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ರಾದ ಶೈಲಜಾ ದೇಶಪಾಂಡೆ, ಒಕ್ಕೂಟದ ನಿರ್ದೇಶಕಿ ಸ್ಮಿತಾ ಶೆಟ್ಟಿ, ಕಾಪು ಪುರಸಭಾ ಸದಸ್ಯ ಸೌಮ್ಯ, ಉದ್ಯಮಿ ಮನೋಹರ್ ಎಸ್ ಶೆಟ್ಟಿ, ಕ್ಷೀರ ಮಳಿಗೆ ಗುತ್ತಿಗೆದಾರರಾದ ಶೈಲಜಾ ಎಂ ಉಪಸ್ಥಿತರಿದ್ದರು.