×
Ad

ಮಂಗಳೂರು ಪ್ರೆಸ್ ಕ್ಲಬ್ ಗೌರವ ಸನ್ಮಾನಕ್ಕೆ ಆಯ್ಕೆ

Update: 2021-03-20 17:16 IST

ಮಂಗಳೂರು : ಮಂಗಳೂರು ಪ್ರೆಸ್ ಕ್ಲಬ್ ವತಿಯಿಂದ ಪ್ರತಿ ವರ್ಷ ಪ್ರೆಸ್ ಕ್ಲಬ್ ದಿನಾಚರಣೆ ಅಂಗವಾಗಿ ಹಿರಿಯ ಪತ್ರಕರ್ತರಿಗೆ ಮಂಗಳೂರು ಪ್ರೆಸ್ ಕ್ಲಬ್ ಗೌರವ ಸನ್ಮಾನ ನೆರವೇರಿಸಲು ನಿರ್ಧರಿಸಲಾಗಿದೆ. ಮುದ್ರಣ ಹಾಗೂ ದೃಶ್ಯ ಮಾಧ್ಯಮಗಳಲ್ಲಿ ಸೇವೆ ಸಲ್ಲಿಸುತ್ತಿರುವ  ಪತ್ರಕರ್ತರ ಹಿರಿತನ, ಸೇವಾವಧಿಯನ್ನು ಪರಿಗಣಿಸಿ ಮಂಗಳೂರು ಪ್ರೆಸ್ ಕ್ಲಬ್ ಸಮಿತಿ ಗೌರವ ಸನ್ಮಾನಕ್ಕೆ ಆಯ್ಕೆ ನಡೆಸಿದೆ.

2021ನೇ ಸಾಲಿನಲ್ಲಿ ಹಿರಿಯ ಪತ್ರಕರ್ತರಾದ ಕೇಶವ ಕುಂದರ್, ಹಿಲರಿ ಕ್ರಾಸ್ತಾ(ಉದಯವಾಣಿ), ಕೆ.ಆನಂದ ಶೆಟ್ಟಿ, ಗುರುವಪ್ಪ, ಎನ್.ಟಿ.ಬಾಳೆಪುಣಿ (ಹೊಸ ದಿಗಂತ), ಯು.ಕೆ.ಕುಮಾರ್‌ನಾಥ್, ಸುಧಾಕರ ಎರ್ಮಾಳ್ (ವಿಜಯಕರ್ನಾಟಕ), ಜಗನ್ನಾಥ ಶೆಟ್ಟಿ ಬಾಳ (ಜಯಕಿರಣ), ಪಿ.ಬಿ.ಹರೀಶ್ ರೈ( ವಿಜಯವಾಣಿ), ಎಸ್.ಜಯರಾಮ್ (ಪಿಟಿಐ) ಇವರುಗಳು ಗೌರವ ಸನ್ಮಾನಕ್ಕೆ ಆಯ್ಕೆಯಾಗಿದ್ದಾರೆ.

ಮಾ.21ರಂದು ಬೆಳಗ್ಗೆ 11ಕ್ಕೆ ರಾಣಿ ಅಬ್ಬಕ್ಕ ಕ್ರೂಸ್‌ನಲ್ಲಿ ನಡೆಯಲಿರುವ ಪ್ರೆಸ್ ಕ್ಲಬ್ ದಿನಾಚರಣೆಯಲ್ಲಿ ಡಾ.ಎಂ.ಮೋಹನ ಅಳ್ವ  ಅವರು ಗೌರವ ಸನ್ಮಾನ ನೆರವೇರಿಸಲಿದ್ದಾರೆ ಎಂದು ಮಂಗಳೂರು ಪ್ರೆಸ್ ಕ್ಲಬ್‌ನ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಆರಿಫ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News