ಸರಕಾರದ ತುರ್ತು ಆದೇಶದಿಂದ ಕಲ್ಲಿನ ಕೋರೆಗಳು ಸ್ಥಗಿತ :ಸಮಸ್ಯೆ ಬಗೆಹರಿಸಲು ಮಾಲಕರ ಮನವಿ
ಮಂಗಳೂರು, ಮಾ.20:ಶಿವಮೊಗ್ಗ, ಚಿಕ್ಕಬ ಳ್ಳಾಪುರದ ಕ್ಲಾರಿ ಸೈಟೊಂದರ ಹೊರಗೆ ಇತ್ತೀಚೆಗೆ ಸಂಭವಿಸಿದ ಸ್ಫೋಟದಲ್ಲಿ ಕೆಲವು ಜನರು ಸಾವನ್ನಪ್ಪಿದ ದುರಂತದ ನಂತರ, ಕರ್ನಾಟಕದ ಸಮಸ್ತ ಕ್ವಾರಿ ಉದ್ಯಮ ವು ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಎಲ್ಲಾ ಕ್ಲಾರಿ ಚಟುವ ಟಿಕೆಗಳನ್ನು ತಕ್ಷಣವೇ ಸ್ಥಗಿತಗೊ ಳಿಸು ವಂತೆ ರಾಜ್ಯ ಸರ್ಕಾರವು ಎಲ್ಲಾ ಪಡೆದ ಬಾರಿ ಮಾಲಕರಿಗೆ ಆದೇಶಿಸಿದೆ ಮತ್ತು ಉದ್ಯಮ ವನ್ನು ಪುನರಾರಂಭಿಸಲು ಕೆಲವು ಕ್ಲಿಷ್ಟ ನಿಯಮಗಳು ಮತ್ತು ಷರತ್ತುಗಳನ್ನು ವಿಧಿಸಿದೆ ಎಂದು ದಕ್ಷಿಣ ಕನ್ನಡ ಉಡುಪಿ ಜಿಲ್ಲಾ ಕ್ವಾರಿ ಮಾಲಕರ ಸಂಘಟನೆಯ ಅಧ್ಯಕ್ಷ ಮನೋಜ್ ಶೆಟ್ಟಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಪ್ರಸ್ತುತ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ 190 ಅನುಮತಿ ಪಡೆದ ಕ್ವಾರಿಗಳು ಕಾರ್ಯನಿರ್ವಹಿಸುತ್ತಿದ್ದು, ಸುಮಾರು 5000 ಕಾರ್ಮಿಕ ರಿಗೆ ನೇರ ಉದ್ಯೋಗ ಮತ್ತು ಇತರ ಸಾವಿರಾರು ಜನರಿಗೆ ಪರೋಕ್ಷ ಉ ದ್ಯೋಗ ವನ್ನು ಒದಗಿಸುತ್ತಿದೆ. ಇದಲ್ಲದೆ ಈ ಉದ್ಯಮ ವು ರಾಜ್ಯ ಸರ್ಕಾರಕ್ಕೆ ರಾಯಲ್ಟಿ ಪಾವತಿಸುವ ರೂಪದಲ್ಲಿ ಸುಮಾರು ರೂ, 75 ಕೋಟಿ ಯಷ್ಟು ವೇದ ಆದಾಯವನ್ನು ಗಳಿಸಿಕೊಡುತ್ತಿದೆ.
ಶಿವಮೊಗ್ಗ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ನಡೆದ ಸ್ಫೋಟದ ನಂತರ, ಸಮಸ್ಯೆಯ ಮೂಲ ಕಾರಣವಾಗಿರುವ ರಾಜ್ಯದಲ್ಲಿ ವ್ಯಾಪಕವಾಗಿ ಹರಡಿರುವ ಅಕ್ರಮ ಕಲ್ಲು ಗಣಿಗಾರಿಕೆಯನ್ನು ನಿರ್ಲಕ್ಷಿಸಿ ಪರವಾನಗಿ ಪಡೆದ ಅಧಿಕೃತ ಕ್ವಾರಿ ಮಾಲಕರಿಗೆ ವಿವಿಧ ಸರ್ಕಾರಿ ಇಲಾಖೆಗಳು ಮತ್ತು ಪೊಲೀಸರು ಅನಗತ್ಯವಾಗಿ ಕಿರುಕುಳ ಕೊಟ್ಟು ಪೀಡಿಸುತ್ತಿದ್ದಾರೆ. ಪರವಾನಗಿ ಪಡೆದ ಕ್ವಾರಿಗಳು ಮುಖ್ಯವಾಗಿ ಕಟ್ಟಡ ನಿರ್ಮಾಣದಲ್ಲಿ ಉಪ ಯೋಗಿಸುವಂತಹ ಕಲ್ಲುಗಳ ಉತ್ಪಾದನೆಯಲ್ಲಿ ತೊಡಗಿಕೊಂಡಿವೆ. ಇದು ಈ ಪ್ರದೇಶದ ಕಟ್ಟಡ ನಿರ್ಮಾಣ ಉದ್ಯಮಕ್ಕೆ ಕಚ್ಚಾ ವಸ್ತುವಾಗಿದೆ. ಕಳೆದ ಹತ್ತು ದಿನಗ ಳಿಂದ ಕಲ್ಲುಗಣಿಗಾರಿಕೆ ಚಟುವಟಿಕೆಗಳು ಸ್ಥಗಿತಗೊಂಡಿದ್ದು, ಇದು ಸ್ಥಳೀಯ ಆರ್ಥಿಕತೆಯ ಮೇಲೆ ಭಾರಿ ಪ್ರತಿಕೂಲ ಪರಿಣಾಮ ಬೀರಲಿದೆ ಮತ್ತು ಕಟ್ಟಡ ನಿರ್ಮಾಣ ಚಟುವಟಿಕೆಯನ್ನು ಸ್ಥಗಿತಗೊಳಿಸಲಿದೆ. ಆದ್ದರಿಂದ ರಾಜ್ಯದಲ್ಲಿ ಕಲ್ಲು ಗಣಿಗಾರಿಕೆ ಮನರಾರಂಭಕ್ಕೆ ತಕ್ಷಣ ಅನುಮತಿ ನೀಡುವಂತೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಕ್ವಾರಿ ಮಾಲಕರ ಸಂಘ ರಾಜ್ಯ ಸರ್ಕಾರಕ್ಕೆ ಮನವಿ ಮಾಡುತ್ತಿದೆ. ಎಲ್ಲಾ ಹರವಾನಗಿ ಪಡೆದ ಕ್ವಾರಿ ನಿರ್ವಾಹಕರು ಈಗಾಗಲೇ ಪರಿಸರ ಕಾನೂನುಗಳು ಮತ್ತು ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದಾರೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಕ್ಲಾರಿ ಮಾಲಕರು ಕಾನೂನನ್ನು ಯಾವುದೇ ರೀತಿಯ ಉಲ್ಲಂಘನಗಳಿಲ್ಲದೆ ಅನುಸರಿಸಿ ಬಂದಿದ್ದಾರೆ. ಆದ್ದರಿಂದ ಸರ್ಕಾರ ಕಲ್ಲುಗಣಿಗಾರಿಕೆ ಚಟುವಟಿಕೆಗಳನ್ನು ಅನಗತ್ಯವಾಗಿ ಸ್ಥಗಿತಗೊಳಿಸುವುದು ಮತ್ತು ಸಾವಿರಾರು ಜನರಿಗೆ ಹೀಗೆ ತೊಂದರೆ ಕೊಡುವುದು ಸರಿಯಲ್ಲ.
“ರಾಜ್ಯದಲ್ಲಿ ಪ್ರಸ್ತುತ ಕಲ್ಲುಗಣಿಗಾರಿಕೆ ಚಟುವಟಿಕೆಗಳನ್ನು ಸ್ಥಗಿತಗೊಳಿಸುವುದು ಶಿವಮೊಗ್ಗ ಚಿಕ್ಕಬಳ್ಳಾಪುರದಲ್ಲಿ ಇತ್ತೀಚೆಗೆ ಸಂಭವಿಸಿದ ಅಪಘಾತಕ್ಕೆ ರಾಜ್ಯ ಸರ್ಕಾರದ ಅವಸರದ ಪ್ರತಿಕ್ರಿಯೆಯಾಗಿದೆ. ರಾಜ್ಯ ವಿಧಿಸಿರುವ ಹೊಸ ನಿಯಮಗಳು ಮತ್ತು ಷರತ್ತುಗಳಿಂದ ಸಮಸ್ಯೆ ಯಾಗಿದೆ.ಸುರಕ್ಷತೆ ಗಾಗಿ ಸರಕಾರ ಹಮ್ಮಿಕೊಳ್ಳುವ ಕ್ರಮಗಳನ್ನು ತಾವು ಅನುಸರಿಸಲು ಬದ್ಧರಾಗಿದ್ದೇವೆ. ನಡೆದಿರುವ ಅಪಘಾತವನ್ನು ಕೂಲಂ ಕಷವಾಗಿ ತನಿಖೆ ಮಾಡಬೇಕು.ಬದಲಾಗಿ ಕಾನೂನು ಪಾಲನೆ ಮಾಡುವ ಕ್ವಾರಿಗಳ ಮಾಲಕರಿಗೆ ಕಿರುಕುಳ ನೀಡಬಾರದು ಎಂದು ಮನೋಜ್ ಶೆಟ್ಟಿ ಆಗ್ರಹಿಸಿದ್ದಾರೆ.
ರಾಜ್ಯದಲ್ಲಿ ಕ್ವಾರಿ ಮಾಲಕರು ಕೇಂದ್ರ ಸರಕಾರದ ಗಣಿ ಸುರಕ್ಷತಾ ನಿಯಮ ವ್ಯಾಪ್ತಿಗೆ ಒಳಪಡದೆ ಇದ್ದರೂ ಅವರಿಗೆ ಡಿಜಿಎಂಎಸ್ ಅನುಮತಿ ಪಡೆಯಲು ಸೂಚನೆ ನೀಡಿರುವುದು ಗೊಂದಲಗಳಿಗೆ ಕಾರಣವಾಗಿದೆ. ಸರಕಾರಿ ಗಣಿಗಳಲ್ಲಿ ಕಲ್ಲು ಗಣಿಗಾರಿಕೆಗೆ ಆ.12, 2016 ರ ಹಿಂದೆ ಸಲ್ಲಿಸಿದ ಅರ್ಜಿಯ ಆಧಾರದ ಮೇಲೆ ಗುತ್ತಿಗೆ ನೀಡಲು ಯಾವುದೇ ಅಡೆತಡೆಗಳಿಲ್ಲ, ಆದ್ದರಿಂದ ಬಾಕಿ ಇರುವ ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡಬೇಕು.ಈ ಹಿಂದೆ ಬೇರೊಂದು ಪ್ರಕರಣಕ್ಕೆ ಸಂಬಂಧಪಟ್ಟಂತೆ ಸರ್ವೋಚ್ಚ ನ್ಯಾಯಾಲಯದ ವಿಚಾರಣೆಗೆ ಪ್ರತಿಕ್ರಿಯಿಸುವಾಗ, ರಾಜ್ಯ ಸರ್ಕಾರವು ರಾಜ್ಯದಲ್ಲಿ ಹೆಚ್ಚಿನ ಅರಣ್ಯ ಪ್ರದೇಶವನ್ನು ತೋರಿಸುವ ಸಲುವಾಗಿ ಕೆಲವು ಅರಣ್ಯ ವ್ಯಾಖ್ಯಾನ ಪ್ರದೇಶಗಳ ವ್ಯಾಪ್ತಿಗೆ ಹೊರತಾದ ಪ್ರದೇಶಗಳನ್ನು ಡೀಮ್ಡ್ ಫಾರೆಸ್ಟ್ ಎಂದು ಗುರುತಿಸಿದೆ. ಇದು ಕ್ವಾರಿ ಪರವಾನಗಿ ಹೊಂದಿರುವವರು ಸೇರಿದಂತೆ ಹಲವಾರು ಮಂದಿಗೆ ಸಮಸ್ಯೆಗಳನ್ನು ಉಂಟುಮಾಡಿದೆ ಮತ್ತು ಈ ಜಮೀನುಗಳಲ್ಲಿ ವಾಸಿಸುವವರು ತಮ್ಮ ಭೂ ಹಿಡುವಳಿಗಳಿಗೆ ಖಾತಾ ಪಡೆಯುವುದನ್ನು ತಡೆಯುತ್ತದೆ. ಈ ಜಮೀನುಗಳಿಗೆ ಕೂಡಲೇ ತೆರವು ನೀಡುವಂತೆ ರಾಜ್ಯ ಸರ್ಕಾರವನ್ನು ಕೋರಲಾಗಿದ್ದು, ಇದು ರಾಜ್ಯಕ್ಕೆ ಭಾರಿ ಆದಾಯವನ್ನು ಸಹ ನೀಡುತ್ತದೆ ಎಂದು ಮನೋಜ್ ಶೆಟ್ಟಿ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಉಡುಪಿ ಘಟಕದ ಅಧ್ಯಕ್ಷ ಸತೀಶ್ ಕಿಣಿ, ಉಪಾಧ್ಯಕ್ಷ ರವೀಂದ್ರ ಶೆಟ್ಟಿ ,ಉಪಾಧ್ಯಕ್ಷ ಕೆ, ಸಿ, ಕಾಮತ್,ಖಜಾಂಜಿ ಸಾಜು ನೀಲಿಯಾರಾ ಕಾರ್ಯದರ್ಶಿ ಮೋಹನ್ ಅಮೀನ್ ಮೊದ ಲಾದ ವರು ಉಪಸ್ಥಿತರಿದ್ದರು.