×
Ad

ಉಳ್ಳಾಲ ಹೊಮೀಯೋಪತಿ ಸೇವೆಗೆ ಚಾಲನೆ

Update: 2021-03-20 21:08 IST

ಉಳ್ಳಾಲ : ಸಣ್ಣದೊಂದು ಪ್ರಾಥಮಿಕ ಆರೋಗ್ಯ ಕೇಂದ್ರ ಇತ್ತು. ಈಗ ಈ ಆಸ್ಪತ್ರೆ ಹೈಟೆಕ್ ಆಸ್ಪತ್ರೆ ಆಗಿ ಬೆಳೆದಿದೆ. ಎಲ್ಲಾ ಸವಲತ್ತುಗಳನ್ನು ಒದಗಿಸಲಾಗಿದೆ. 30 ಕಿಮೀ ವ್ಯಾಪ್ತಿಯಲ್ಲಿ ದೊಡ್ಡ ಆಸ್ಪತ್ರೆ ಕೊಡಲು ಇಲ್ಲ ಎಂಬ ನಿಯಮ ಇದೆ. ಆದರೂ ಕೂಡಾ ಉಳ್ಳಾಲದಲ್ಲಿ ಸಮುದಾಯ ಆರೋಗ್ಯ ಕೇಂದ್ರ ನಿರ್ಮಾಣ ಆಗಿದೆ. ಅಲೋಪತಿಗೆ ಸಂಬಂಧಪಟ್ಟ  ವ್ಯವಸ್ಥೆ ಮಾಡಲಾಗಿದೆ ಎಂದು ಶಾಸಕ ಯು.ಟಿ. ಖಾದರ್ ಹೇಳಿದರು.

ಅವರು ಫಾದರ್ ಮುಲ್ಲರ್ ಹೋಮಿಯೋಪತಿ ವೈದ್ಯಕೀಯ ಮಹಾ ವಿದ್ಯಾಲಯ ಆಸ್ಪತ್ರೆ ಹಾಗೂ ತಾಲೂಕು ಆಯುಷ್ ಘಟಕ ಉಳ್ಳಾಲ ಇದರ ಸಹಯೋಗದೊಂದಿಗೆ ಆರಂಭಗೊಂಡ ಹೋಮಿಯೋಪತಿ ಸೇವೆಗಳನ್ನು ಉದ್ಘಾಟಿಸಿ ಮಾತನಾಡಿದರು.

ವೈದ್ಯರು ಸರ್ಕಾರಿ ಆಸ್ಪತ್ರೆ ಎನ್ನುವ ಬದಲು ನಮ್ಮ ಸ್ವಂತ ಆಸ್ಪತ್ರೆ ಎಂದು ಲೆಕ್ಕಾಚಾರ ಹಾಕಿ ಚಿಕಿತ್ಸೆ ನೀಡಿದರೆ ಸೇವೆ ಉತ್ತಮ ವಾಗಿ ಬೆಳೆಯುತ್ತದೆ ಎಂದರು. ಡಾ.ಕಿರಣ್ ಮಾತನಾಡಿದರು. ದ.ಕ.ಜಿಲ್ಲಾ ಆಯುಷ್ ಅಧಿಕಾರಿ ಡಾ.ಮುಹಮ್ಮದ್ ಇಕ್ಬಾಲ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಈ ಸಂದರ್ಭದಲ್ಲಿ ಯೂಸುಫ್ ಉಳ್ಳಾಲ, ಅಯ್ಯೂಬ್ ಮಂಚಿಲ, ಡಾ.ಪ್ರಶಾಂತ್, ಡಾ.ಇಕ್ಬಾಲ್, ಹಕ್, ಡೆನ್ನಿಸ್ ಡಿಸೋಜ, ಕುಂಞಿ ಮೋನು, ಜಬ್ಬಾರ್, ತಾಲೂಕು ಆರೋಗ್ಯಾಧಿಕಾರಿ ಸುಜಯ್, ಡಾ.ರಘು ರೋಶನ್ ಕ್ರಾಸ್ತಾ, ಚಿತ್ರ ಕಲಾ, ಡಾ.ವೇದವಾಸ್  ತಾ.ಪಂ.ಅಧ್ಯಕ್ಷ ಮುಹಮ್ಮದ್ ಮೋನು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News