ಸಸಿಹಿತ್ಲು: ಸಚಿವ ಯೋಗೇಶ್ವರ್ ಭಾಗವಹಿಸಿದ್ದ ಕಾರ್ಯಕ್ರಮದ ವೇದಿಕೆ ಕುಸಿತ

Update: 2021-03-20 16:53 GMT

ಮುಲ್ಕಿ: ಸಸಿಹಿತ್ಲು ನಂದಿನಿ ಕಡಲತೀರದಲ್ಲಿ ಆಯೋಜಿಸಿದ್ದ ನಂದಿನಿ ಉತ್ಸವ ಉದ್ಘಾಟನೆ ವೇಳೆ ವೇದಿಕೆ ಕುಸಿದಿದ್ದು ಸಚಿವ ಯೋಗೇಶ್ವರ್ ಅಪಾಯದಿಂದ ಪಾರಾಗಿದ್ದಾರೆ.

ಕರ್ನಾಟಕದ ಪ್ರವಾಸೋದ್ಯಮ ಹಾಗೂ ಪರಿಸರ ಸಚಿವ ಸಿಪಿ ಯೋಗೇಶ್ವರ್ ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿ ಸಮೀಪದ ಸಸಿಹಿತ್ಲು ನಂದಿನಿ ತಟದಲ್ಲಿ ಎರಡು ದಿನಗಳ ಕಾಲ ಆಯೋಜಿಸಿದ್ದ ನಂದಿನಿ ಉತ್ಸವವನ್ನು ಉದ್ಘಾಟನೆ ಮಾಡಲು ಆಗಮಿಸಿದ್ದು, ನದಿಯ ತಟದಲ್ಲಿ ಹಾಕಿರುವ ವೇದಿಕೆಯ ಮೇಲೆ ಇತರ ಅತಿಥಿಗಳೊಡನೆ ಮೇಲೇರುತ್ತಿದ್ದಂತೆ ವೇದಿಕೆ ಏಕಾಏಕಿ ಕುಸಿದಿದೆ.

ವೇದಿಕೆ ಕುಸಿಯುತ್ತಿದ್ದಂತೆ ಸಚಿವರು ಹಾಗೂ ಕಟೀಲು ಕ್ಷೇತ್ರದ ಅರ್ಚಕರಾದ ಅನಂತಪದ್ಮನಾಭ ಆಸ್ರಣ್ಣ ಸಹಿತ ಹಲವರು ಬಿದ್ದಿದ್ದು ನೂಕುನುಗ್ಗಲಿನ ವಾತಾವರಣ ಸೃಷ್ಟಿಯಾಯಿತು. ಕೂಡಲೇ ಸ್ವಯಂಸೇವಕರು ಕಾರ್ಯಪ್ರವೃತ್ತರಾಗಿ ಅತಿಥಿಗಳನ್ನು ಸುರಕ್ಷಿತ ಜಾಗಕ್ಕೆ ಸ್ಥಳಾಂತರಿಸಿದರು ಎಂದು ತಿಳಿದುಬಂದಿದೆ.

ಪ್ರವಾಸೋದ್ಯಮ ಸಚಿವರು ನಂದಿನಿ ತಟದಲ್ಲಿ ನಿರ್ಮಿಸಿದ ವೇದಿಕೆಗೆ ತೆರಳಿ ನದಿಯಲ್ಲಿ ದೀಪಗಳನ್ನು ಬಿಡುವ ಕಾರ್ಯಕ್ರಮವು ವೇದಿಕೆ ಕುಸಿತದಿಂದ ರದ್ದಾಯಿತು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News