ಹಗ್ಗಜಗ್ಗಾಟ : ಉಳ್ಳಾಲ ನಗರ ಸಭೆ ಪ್ರಥಮ
Update: 2021-03-20 22:42 IST
ಉಳ್ಳಾಲ : ಕೋಟಾದಲ್ಲಿ ನಡೆದ ಹೊಳಪು ಕ್ರೀಡಾಕೂಟ ದಲ್ಲಿ ಪುರುಷ ರ ಹಗ್ಗ ಜಗ್ಗಾಟ ದಲ್ಲಿ ಉಳ್ಳಾಲ ನಗರ ಸಭೆ ಪ್ರಥಮ ಸ್ಥಾನ ಗಳಿಸಿದೆ.
ಈ ಪಂದ್ಯಾಟದಲ್ಲಿ ಅಯ್ಯೂಬ್ ಮಂಚಿಲ, ಇಬ್ರಾಹಿಂ ಅಶ್ರಫ್, ಅಬ್ದುಲ್ ಜಬ್ಬಾರ್, ರಮೀಝ್ ಕೋಡಿ, ಅಸ್ಗರ್ ಅಲಿ, ಅಝೀಝ್ ಕೋಡಿ, ಚಂದ್ರ ಹಾಸ್, ಮಜೀದ್, ಗುರುಪ್ರಸಾದ್, ರಂಜಿತ್, ಗಜೇಂದ್ರ,ದಂಡ್ಯಪ್ಪ ಮೊದಲಾದವರು ಭಾಗವಹಿಸಿದ್ದರು. ಪೌರಾಯುಕ್ತ ರಾಯಪ್ಪ ರವರು ಸ್ಪರ್ಧೆ ಗಳಲ್ಲಿ ಭಾಗವಹಿಸಲು ಪ್ರೋತ್ಸಾಹಿಸಿ ಅಭಿನಂದಿಸಿದರು.
2020 ನೇ ಸಾಲಿನಲ್ಲಿ ನಡೆದ ಹೊಳಪು ಕಾರ್ಯಕ್ರಮ ದಲ್ಲಿ ಮಹಿಳಾ ತಂಡ ತ್ರೋಬಾಲ್ ಸ್ಪರ್ಧೆ ಯಲ್ಲಿ ಪ್ರಥಮ, ಪುರುಷರ ಹಗ್ಗ ಜಗ್ಗಾಟ ದಲ್ಲಿ ದ್ವಿತೀಯ ಸ್ಥಾನ ಗಳಿಸಿತ್ತು.