×
Ad

ಫಿಲಡೆಲ್ಫಿಯಾ: ಶೂಟೌಟ್‌ಗೆ ಓರ್ವ ಬಲಿ

Update: 2021-03-21 23:34 IST

ಫಿಲಡೆಲ್ಫಿಯಾ,ಮಾ.21: ಫಿಲಡೆಲ್ಫಿಯಾದಲ್ಲಿ ಶನಿವಾರ ಅಕ್ರಮವಾಗಿ ಗುಂಪು ಸೇರಿದ್ದ ಜನರ ಮೇಲೆ ದುಷ್ಕರ್ಮಿಯೊಬ್ಬ ನಡೆಸಿದ ಗುಂಡೆಸೆತದಲ್ಲಿ ಓರ್ವ ಮೃತಪಟ್ಟು, ಇತರ ಐವರು ಗಾಯಗೊಂಡಿದ್ದಾರೆ.

 ಶನಿವಾರ ಮುಂಜಾನೆ 3:45ರ ವೇಳೆಗೆ ಉತ್ತರ ಫಿಲಡೆಲ್ಫಿಯಾದ ನೈಸ್‌ಟೌನ್ ವಸತಿಪ್ರದೇಶದಲ್ಲಿ ಹಾಟ್‌ಪಾಟ್ ಕ್ಯುಸಿನ್ ಎಂಬ ಉಪಹಾರಗೃಹ ಪಕ್ಕದಲ್ಲೇ ಇರುವ ಬಾಡಿಗೆಯ ಸಭಾಭವನದ ಹೊರಗೆ ಹಾಗೂ ಒಳಗೆ ಗುಂಡು ಹಾರಾಟ ನಡೆದಿತ್ತು.

29 ವರ್ಷದ ಯುವಕನೊಬ್ಬನಿಗೆ ದುಷ್ಕರ್ಮಿಯು 14 ಸಲ ಗುಂಡಿಕ್ಕಿದ್ದು, ಆತನನ್ನು ಟೆಂಪಲ್ ಯೂನಿವರ್ಸಿಟಿ ಆಸ್ಪತ್ರೆಗೆ ದಾಖಲಿ ಸಲಾಗಿದ್ದರೂ, ಚಿಕಿತ್ಸೆ ವಿಫಲವಾಗಿ ಆತ ಕೊನೆಯುಸಿರೆಳೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. 33,38 ಹಾಗೂ 41 ವರ್ಷದ ಮೂವರು ಪುರುಷರು ಹಾಗೂ 30 ವರ್ಷದ ಮಹಿಳೆಗೆ ಗಂಭೀರವಾದ ಗಾಯಗಳಾಗಿವೆ ಎಂದವರು ಹೇಳಿದ್ದಾರೆ.

 ಘಟನೆಯ ಬಳಿಕ ಕನಿಷ್ಠ 150 ಮಂದಿ ಸ್ಥಳದಿಂದ ಪಲಾಯನಗೈದಿದ್ದಾರೆ. ಲಾಕ್‌ಡೌನ್ ಆದೇಶದ ಹಿನ್ನೆಲೆಯಲ್ಲಿ ಸಭೆ ಸೇರುವುದು ಅಕ್ರಮವಾಗಿದೆ. ಜನರು ಭಾರೀ ಸಂಖ್ಯೆಯಲ್ಲಿ ಜಮಾಯಿಸುವುದನ್ನು ತಡೆಯಲು ಪೊಲೀಸರು ಬೈಸಿಕಲ್ ಹಾಗೂ ಕಾಲ್ನಡಿಗೆಯ ಗಸ್ತುಗಳನ್ನು ಹೆಚ್ಚಿಸಲಿದ್ದಾರೆಂದು ಪೊಲೀಸ್ ಆಯುಕ್ತ ಡೇನಿಲ್ ಔಟ್‌ಲಾ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News