×
Ad

ಜರ್ಮನಿಯಲ್ಲಿ ಏಪ್ರಿಲ್‌ ವರೆಗೆ ಲಾಕ್‌ಡೌನ್ ವಿಸ್ತರಣೆ?

Update: 2021-03-21 23:59 IST

ಫ್ರಾಂಕ್‌ಫರ್ಟ್,ಮಾ.21: ಜರ್ಮನಿಯಲ್ಲಿ ಕೊರೋನ ವೈರಸ್‌ನ ಮೂರನೆ ಅಲೆ ಹರಡುತ್ತಿರುವ ಹಿನ್ನೆಲೆಯಲ್ಲಿ ಈಗಾಗಲೇ ಹೇರಲಾಗಿರುವ ಅಂಶಿಕ ಲಾಕ್‌ಡೌನ್ ಅನ್ನು ಎಪ್ರಿಲ್‌ವರೆಗೂ ವಿಸ್ತರಿಸಲು ಚಾನ್ಸಲರ್ ಆ್ಯಂಜೆಲಾ ಮರ್ಕೆಲ್ ಬಯಸಿರುವುದಾಗಿ ರವಿವಾರ ವರದಿಯೊಂದು ತಿಳಿಸಿದೆ.

 ಪ್ರಸಕ್ತ ಜರ್ಮನಿಯಲ್ಲಿ ಕೊರೋನ ಸೋಂಕಿನ ಹೊಸ ಪ್ರಭೇದಗಳು ಕಾಣಿಸಿಕೊಂಡಿರುವುದರಿಂದ ಸೋಂಕಿನ ಪ್ರಕರಣಗಳಲ್ಲಿ ವಿಪರೀತ ಹೆಚ್ಚಳವಾಗಿರುವುದರಿಂದ ಅಂಶಿಕ ಲಾಕ್‌ಡೌನ್ ನಿರ್ಬಂಧಗಳನ್ನು ವಿಸ್ತರಿಸಲಾಗುವುದೆಂದು ಕರಡು ದಾಖಲೆಯೊಂದು ತಿಳಿಸಿದೆ.

ತಜ್ಞರು ಸಿದ್ಧಪಡಿಸಿರುವ ಈ ಕರಡು ಪ್ರತಿಯನ್ನು ಏಂಜೆಲಾ ಮರ್ಕೆಲ್ ಹಾಗೂ ಜರ್ಮನಿಯ 16 ರಾಜ್ಯಗಳ ವರಿಷ್ಠರು ಚರ್ಚಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News