×
Ad

ಐಎಸ್ ಎಸ್ ಎಫ್ ವಿಶ್ವಕಪ್: ಭಾರತದ ದಿವ್ಯಾಂಶ್ ಸಿಂಗ್, ವಲರಿವನ್ ಗೆ ಚಿನ್ನ

Update: 2021-03-22 12:09 IST
ಎಲವೆನಿಲ್ ವಲರಿವನ್

ಹೊಸದಿಲ್ಲಿ: ರಾಷ್ಟ್ರ ರಾಜಧಾನಿಯಲ್ಲಿ ನಡೆಯುತ್ತಿರುವ ಐಎಸ್ ಎಸ್ ಎಫ್ ವಿಶ್ವಕಪ್ ನ 10 ಮೀ. ಏರ್ ರೈಫಲ್ ಮಿಕ್ಸೆಡ್ ಟೀಮ್ ಸ್ಪರ್ಧೆಯಲ್ಲಿ ಸೋಮವಾರ ಭಾರತದ ದಿವ್ಯಾಂಶ್ ಸಿಂಗ್ ಪಾನ್ವರ್ ಹಾಗೂ ಎಲವೆನಿಲ್ ವಲರಿವನ್  ಅವರು ಚಿನ್ನದ ಪದಕ ಗೆದ್ದುಕೊಂಡಿದ್ದಾರೆ.

ಅತ್ಯುತ್ತಮ ಪ್ರದರ್ಶನ ನೀಡಿರುವ ಭಾರತದ ಜೋಡಿ ಹಂಗೇರಿಯದ ಇಸ್ಟವಾನ್ ಪೆನಿ ಹಾಗೂ ಎಸ್ಝೆಟರ್ ಡೆನಿಸ್ ಅವರನ್ನು 16-10 ಅಂತರದಿಂದ ಸೋಲಿಸಿದರು.

ಅಮೆರಿಕದ ಲುಕಾಸ್ ಕೊಝಿನೆಸ್ಕಿ ಹಾಗೂ ಮೇರಿ ಕರೊಲಿನ್ ಅವರು ಮೂರನೇ ಸ್ಥಾನ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News