×
Ad

ನೀರು ದುರ್ಬಳಕೆ ಮಾಡಿದರೆ ದಂಡ: ಸೋಮೇಶ್ವರ ಪುರಸಭೆ ಎಚ್ಚರಿಕೆ

Update: 2021-03-22 15:06 IST

ಉಳ್ಳಾಲ, ಮಾ.22: ಸೋಮೇಶ್ವರ ಪುರಸಭಾ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆ ಉದ್ಭವಿಸಿದ್ದು, ಕುಡಿಯುವ ನೀರು ದುರ್ಬಳಕೆ ಮಾಡಿದಂತೆ ಪುರಸಭೆ ಮನವಿ ಮಾಡಿದೆ.

ಪುರಸಭಾ ವ್ಯಾಪ್ತಿಯ ಮನೆಯ ಅಂಗಳ, ವಾಹನ ತೊಳೆಯಲು ನಳ್ಳಿ ಸಂಪರ್ಕದ ನೀರು ಬಳಕೆ ಮಾಡಿದಲ್ಲಿ ನೀರಿನ ಸಂಪರ್ಕ ಕಡಿತ ಮಾಡುವ ಜತೆಗೆ ದಂಡ ವಿಧಿಸಲಾಗುವುದು ಎಂದು ಆಡಳಿತಾಧಿಕಾರಿ ಮದನ್ ಮೋಹನ್ ಹಾಗೂ ಮುಖ್ಯಾಧಿಕಾರಿ ವಾಣಿ ಆಳ್ವ ಪ್ರಕಟನೆಯಲ್ಲಿ ಎಚ್ಚರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News