×
Ad

ಕೆಎಸ್‌ಸಿಎ 16 ವರ್ಷದೊಳಗಿನವರ ಮಂಗಳೂರು ವಲಯ ತಂಡದ ಆಯ್ಕೆ

Update: 2021-03-22 19:20 IST

ಮಂಗಳೂರು, ಮಾ.22:ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ವತಿಯಿಂದ ಬೆಂಗಳೂರಿ ನಲ್ಲಿ ಈ ತಿಂಗಳ 31ರಿಂದ ನಡೆಯಲಿರುವ 16 ವರ್ಷದೊಳಗಿನವರ ಅಂತರ್ ವಲಯ ಕ್ರಿಕೆಟ್ ಪಂದ್ಯಾಟದಲ್ಲಿ ಭಾಗವಹಿಸುವ ಮಂಗಳೂರು ವಲಯ ತಂಡವನ್ನು ಆಯ್ಕೆ ಮಾಡಲಾಗಿದೆ.

ಪ್ರಾಥಮಿಕ ಹಂತದಲ್ಲಿ ಮಾಜಿ ಟೆಸ್ಟ್ ಕ್ರಿಕೆಟಿಗ ರಘುರಾಮ್ ಭಟ್ ಅವರ ಮೇಲ್ವಿಚಾರಣೆಯಲ್ಲಿ ಉಡುಪಿ, ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲಾ ತಂಡವನ್ನು ಆರಿಸಲಾಗಿತ್ತು. ಬಳಿಕ ಜರಗಿದ ಅಂತರ್ ಜಿಲ್ಲಾ ಪಂದ್ಯಾಟದಲ್ಲಿ ಆಟಗಾರರು ತೋರಿದ ನಿರ್ವಹಣೆಯ ಆಧಾರದಲ್ಲಿ ಇದೀಗ ಮಂಗಳೂರು ವಲಯ ತಂಡವನ್ನು ಆಯ್ಕೆ ಮಾಡಲಾಗಿದೆ. ತಂಡಕ್ಕೆ ಉಡುಪಿ ತಂಡದ ಆಶೀಷ್ ನಾಯಕ್ ನಾಯಕರಾಗಿರುತ್ತಾರೆ.

ತಂಡ: ಆಶೀಷ್ ನಾಯಕ್ (ನಾಯಕ), ನಿಶ್ಚಿತ್ ಪೈ (ಉಪನಾಯಕ), ಸನಿತ್ ಶೆಟ್ಟಿ, ಶ್ರವಣ್, ಪ್ರಥಮ್ ರಾಜೇಶ್, ವಿಕಾಸ್ ಎರ್ಮಾಳ್, ರೋಹನ್ ರೇವಣ್‌ಕರ್, ಅಕ್ಷಯ್ ಕಾಮತ್, ಆದಿತ್ಯ ಕೋಟ್ಯಾನ್, ಸುಪ್ರಿತ್ ಕುಮಾರ್, ಯಕ್ಷಿತ್, ಅಮೃತ್ ಪ್ರವೀಣ್, ಪ್ರಣವ್‌ರಾಜ್, ನಿಖಿಲ್ ಐತಾಳ್, ವೈಭವ್, ವಿಕಾಸ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News