×
Ad

ಮೌಲವಿಗೆ ದುಷ್ಕರ್ಮಿಗಳಿಂದ ಹಲ್ಲೆಗೆ ಖಂಡನೆ

Update: 2021-03-22 19:31 IST

ಮಂಗಳೂರು, ಮಾ.22: ಸಕಲೇಶಪುರ ತಾಲೂಕಿನ ಸುಂಡಕೆರೆ ಗ್ರಾಮದ ಮೌಲವಿ ಅಬ್ದುಲ್ ನಾಸಿರ್ ದಾರಿಮಿಯ ಮೇಲೆ  ವಾಹನ ದಲ್ಲಿ ಬಂದ ನಾಲ್ವರು ದುಷ್ಕರ್ಮಿಗಳು ಅವಾಚ್ಯ ಶಬ್ದಗಳಿಂದ ಬೈದು ದೈಹಿಕ ಹಲ್ಲೆ ನಡೆಸಿರುವುದು ಖಂಡನೀಯ. ಈ ಕೃತ್ಯ ಕೋಮು ಉದ್ವಿಗ್ನತೆ ಯನ್ನು ಪ್ರಚೋದಿಸುವ ಹಾಗೂ ಅಶಾಂತಿಯನ್ನು ಕದಡುವ ಮುಂದುವರಿದ ಭಾಗವಾಗಿದೆ. ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟದ ಅಧ್ಯಕ್ಷ, ಮಾಜಿ ಮೇಯರ್ ಕೆ. ಆಶ್ರಫ್ ಆಗ್ರಹಿಸಿದ್ದಾರೆ.

ರಾಜ್ಯ ದಾರಿಮಿ ಉಲಮಾ ಒಕ್ಕೂಟ: ಎಲ್ಲಾ ರೀತಿಯ ಭಯೋತ್ಪಾದನೆ, ಕೋಮುವಾದದ ವಿರುದ್ದ ನಿರಂತರ ಧ್ವನಿ ಎತ್ತುತ್ತಾ ದೇಶದಲ್ಲಿ ಶಾಂತಿ ಸ್ಥಾಪಿಸಲು ಪ್ರಯತ್ನಿಸುತ್ತಿರುವ ಸೌಹಾರ್ದತೆಯ ಪ್ರಚಾರಕರಾದ ಮಸೀದಿಯ ಇಮಾಮರ ಮೇಲೆ ವಿನಾ ಕಾರಣ ಹಲ್ಲೆ ನಡೆಸುವುದು ದೇಶ ದ್ರೋಹ ಕೃತ್ಯವಾಗಿದೆ. ಈ ಕೃತ್ಯ ಖಂಡನೀಯ ಎಂದು ರಾಜ್ಯ ದಾರಿಮಿ ಉಲಮಾ ಒಕ್ಕೂಟ ಹೇಳಿಕೆಯಲ್ಲಿ ತಿಳಿಸಿದೆ.

ದೇಶ ಪ್ರೇಮ ಎಂದರೆ ದೇಶದ ಕಾನೂನಿಗೆ ಬದ್ದವಾಗಿ ಬದುಕುವ ಪ್ರತಿಯೊಬ್ಬ ಪ್ರಜೆಯನ್ನು ಪ್ರೀತಿಸುವುದಾಗಿದೆ. ಶಾಂತಿ-ಕೋಮು ಸಾಮರ ಸ್ಯಕ್ಕೆ ಹೆಸರಾದ ಹಾಸನ ಜಿಲ್ಲೆಯ ಸುಂಡಕೆರೆಯ ಮುಸ್ಲಿಮರ ಧಾರ್ಮಿಕ ಗುರು ನಾಸಿರ್ ದಾರಿಮಿಯ ಮೇಲೆ ಹಲ್ಲೆ ನಡೆಸುವ ಮೂಲಕ ಜಿಲ್ಲೆಯ ಕೋಮುಸಾಮರಸ್ಯವನ್ನು ಕದಡಲು ದುಷ್ಟ ಶಕ್ತಿಗಳು ಮಾಡಿದ ವ್ಯವಸ್ಥಿತ ಪಿತೂರಿ ಇದಾಗಿದೆ. ಹಾಗಾಗಿ ಹಲ್ಲೆ ಕೋರರನ್ನು ಬಂಧಿಸಿ ಕಾನೂನು ಕ್ರಮ ಜರಗಿಸುವಂತೆ ರಾಜ್ಯ ದಾರಿಮಿ ಉಲಮಾ ಒಕ್ಕೂಟದ ಎಸ್‌ಬಿ ಮುಹಮ್ಮದ್ ದಾರಿಮಿ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News