ಆರ್‌ಎಸ್‌ಬಿ ಕೊಂಕಣಿಯ ಪ್ರಥಮ ಸಿನೆಮಾದ ಪೋಸ್ಟರ್ ಬಿಡುಗಡೆ
Update: 2021-03-22 19:34 IST
ಉಡುಪಿ, ಮಾ.22: ಮಣಿಪಾಲ ಆರ್‌ಎಸ್‌ಬಿ ಸಭಾಭವನದಲ್ಲಿ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ವತಿಯಿಂದ ಜರಗಿದ ಕೊಂಕಣಿ ಸಾಹಿತ್ಯ ಸಮ್ಮೇಳನದಲ್ಲಿ ರವಿವಾರ ಅಮ್ಚೆ ಕ್ರಿಯೇಶನ್ಸ್ ಮುಖಾಂತರ ಸಂದೀಪ್ ಕಾಮತ್ ನಿರ್ದೇಶನದ ಆರ್‌ಎಸ್‌ಬಿ ಸಮಾಜದ ಕೊಂಕಣಿ ಭಾಷಿಕ ಪ್ರಪ್ರಥಮ ಚಲನಚಿತ್ರ ಅಮ್ಚೆ ಸಂಸಾರ್ ಇದರ ಟೈಟಲ್ ಪೋಸ್ಟರ್‌ನ ಬಿಡುಗಡೆ ಮಾಡ ಲಾಯಿತು.
ತರಂಗ ವಾರಪತ್ರಿಕೆಯ ವ್ಯವಸ್ಥಾಪಕ ಸಂಪಾದಕಿ ಸಂಧ್ಯಾ ಪೈ ಪೋಸ್ಚರ್ ಬಿಡು ಗಡೆಯನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ಸಮ್ಮೇಳನದ ಸರ್ವಾಧ್ಯಕ್ಷ ಡಾ.ಕಸ್ತೂರಿ ಮೋಹನ್ ಪೈ, ಅಕಾಡೆಮಿ ಅಧ್ಯಕ್ಷ ಡಾ.ಕೆ.ಜಗದೀಶ ಪೈ, ಸಮ್ಮೇಳನದ ಕಾರ್ಯಾಧ್ಯಕ್ಷ ಮಹೇಶ್ ಠಾಕೂರ್, ಪ್ರಧಾನ ಕಾರ್ಯದರ್ಶಿ ಅಮೃತ್ ಶೆಣೈ, ಪ್ರಧಾನ ಸಂಚಾಲಕಿ ಪೂರ್ಣಿಮಾ ಸುರೇಶ್ ನಾಯಕ್, ಚಿತ್ರ ನಿರ್ದೇಶಕ ಸಂದೀಪ್ ಕಾಮತ್, ಸಿನೇಮಾ ಛಾಯಾ ಗ್ರಾಹಕ ಭುವನೇಶ್ ಪ್ರಭು ಹೀರೇಬೆಟ್ಟು, ಚಿತ್ರದ ತಂತ್ರಜ್ಞರು, ಕಲಾವಿದರು ಉಪಸ್ಥಿತರಿದ್ದರು. ಬಿ. ಪುಂಡಲೀಕ ಮರಾಠೆ ಶಿರ್ವ ಕಾರ್ಯಕ್ರಮ ನಿರೂಪಿಸಿದರು.