×
Ad

ಬಜಾಲ್ ನಂತೂರು: ಕ್ರಿಕೆಟ್ ಪಂದ್ಯಾಟಕ್ಕೆ ಚಾಲನೆ

Update: 2021-03-22 19:37 IST

ಮಂಗಳೂರು, ಮಾ.22: ದ.ಕ.ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ನಝೀರ್ ಬಜಾಲ್ ಸಾರಥ್ಯದಲ್ಲಿ ಯಂಗ್ ಫ್ರೆಂಡ್ಸ್ ಸರ್ಕಲ್ ವತಿಯಿಂದ ಬಜಾಲ್ ನಂತೂರಿನಲ್ಲಿ ಮಾ.23ರವೆಗೆ ಆಯೋಜಿಸಲಾದ ವೈಎಫ್‌ಸಿ-2021 ಕ್ರಿಕೆಟ್ ಪಂದ್ಯಾಟಕ್ಕೆ ರಾಜ್ಯ ಯುವ ಕಾಂಗ್ರೆಸ್ ಮುಖಂಡ ಮುಹಮ್ಮದ್ ನಲಪಾಡ್ ರವಿವಾರ ಚಾಲನೆ ನೀಡಿದರು

ಬಳಿಕ ಮಾತನಾಡಿದ ಅವರು ಕ್ರೀಡೆಗಳು ಮನುಷ್ಯರಲ್ಲಿ ಸ್ಪರ್ಧಾ ಮನೋಭಾವ ಮೂಡಿಸುವುದರ ಜೊತೆಗೆ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೂ ಹೆಚ್ಚು ಸಹಕಾರಿಯಾಗುತ್ತವೆ. ಆಧುನಿಕತೆ ಬೆಳೆದಂತೆ ಗ್ರಾಮೀಣ ಕ್ರೀಡೆಗಳು ಮರೆಯಾಗುತ್ತಿದೆ. ಯುವಕರು ಗ್ರಾಮೀಣ ಕ್ರೀಡೆ ಮತ್ತು ಕಲೆಗಳನ್ನು ಉಳಿಸಿ ಬೆಳೆಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಯುವ ಕಾಂಗ್ರೆಸ್ ಮುಖಂಡ ಸುಹೈಲ್ ಕಂದಕ್, ಬೆಂಗಳೂರು ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್ ಎಚ್, ಬಿಬಿಎಂಪಿ ಸದಸ್ಯ ರಘು, ಎಚ್.ಎಸ್.ಹನೀಫ್, ಬಿ. ಫಕ್ರುದ್ದೀನ್, ಆಲ್ ಕಾಲೇಜ್ ಸ್ಟೂಡೆಂಟ್ ಯೂನಿಯನ್ ಕಾರ್ಯಾಧ್ಯಕ್ಷ ನೂರ್‌ಮುಹಮ್ಮದ್, ಬದ್ರು ಮುನೀರ್, ಮುಹಮ್ಮದ್ ನವಾಝ್, ಎಂ.ಕೆ. ಮೋನು ಕಣ್ಣೂರ್, ಎಚ್.ಎಸ್.ಜಬ್ಬಾರ್, ಮುಹಮ್ಮದ್ ನವಾಝ್, ಇಮ್ರಾನ್, ಹಾರೀಶ್, ಎಂ.ಎ. ಹಸನಬ್ಬ ಮೋನು ಉಪಸ್ಥಿತರಿದ್ದರು. ಗಝ್ಝಿಲಿ ಕುಕ್ಕಾಜೆ ಸ್ವಾಗತಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News