ಮಂಗಳೂರು ಸೆಂಟ್ರಲ್- ಮುಂಬೈ ರೈಲು ಜು. 1ರವರೆಗೆ ವಿಸ್ತರಣೆ
ಉಡುಪಿ, ಮಾ.22: ಮಂಗಳೂರು ಸೆಂಟ್ರಲ್ ಹಾಗೂ ಲೋಕಮಾನ್ಯ ತಿಲಕ್ ಮುಂಬಯಿ ನಡುವೆ ಸಂಚರಿಸುವ ದೈನಂದಿನ ಸೂಪರ್‌ಫಾಸ್ಟ್ ಹಬ್ಬದ ಸ್ಪೆಷಲ್ ರೈಲು ಸಂಚಾರವನ್ನು ಮುಂದಿನ ಜುಲೈ 1ರವರೆಗೆ ವಿಸ್ತರಿಸಲಾಗಿದೆ ಎಂದು ಕೊಂಕಣ ರೈಲ್ವೆ ಪ್ರಕಟಣೆ ತಿಳಿಸಿದೆ.
ರೈಲು ನಂ.02620 ಮಂಗಳೂರು ಸೆಂಟ್ರಲ್-ಲೋಕಮಾನ್ಯ ತಿಲಕ್ ದೈನಂದಿನ ಸೂಪರ್‌ಫಾಸ್ಟ್ ಹಬ್ಬದ ಸ್ಪೆಷಲ್ ರೈಲಿನ ಸಂಚಾರವನ್ನು ಎ.1ರಿಂದ ಜೂ.30ರವರೆಗೆ ವಿಸ್ತರಿಸಿದರೆ, ರೈಲು ನಂ.02619 ಲೋಕಮಾನ್ಯ ತಿಲಕ್-ಮಂಗಳೂರು ಸೆಂಟ್ರಲ್ ರೈಲಿನ ಸಂಚಾರವನ್ನು ಎ.2ರಿಂದ ಜು.1ರವರೆಗೆ ವಿಸ್ತರಿಸಲಾಗಿದೆ.
ಪ್ರತಿ ಬುಧವಾರ ಸಂಚರಿಸುವ ತಿರುನಲ್ವೇಲಿ-ದಾದರ್ ಸಾಪ್ತಾಹಿಸ ಸೂಪರ್‌ಫಾಸ್ಟ್ ರೈಲನ್ನು ಎ.7ರಿಂದ ಜೂ.30ರವರೆಗೆ ಹಾಗೂ ಪ್ರತಿ ಗುರುವಾರ ಸಂಚರಿಸುವ ದಾದರ್- ತಿರುನಲ್ವೇಲಿ ರೈಲಿನ ಸಂಚಾರವನ್ನು ಎ.8ರಿಂದ ಜು.1ರವರೆಗೆ ವಿಸ್ತರಿಸಲಾಗಿದೆ.
ರೈಲು ನಂ.04034/04033 ಎಚ್.ನಿಝಾಮುದ್ದೀನ್- ತಿರುವನಂತಪುರಂ ಸೆಂಟ್ರಲ್- ನಿಝಾಮುದ್ದೀನ್ ಸೂಪರ್‌ಫಾಸ್ಟ್ ಎಕ್ಸೆಪ್ರೆಸ್ ವಿಶೇಷ ರೈಲು ಮಾ.26ರ ಶುಕ್ರವಾರ ಬೆಳಗ್ಗೆ 5 ಗಂಟೆಗೆ ನಿಝಾಮುದ್ದೀನ್‌ನಿಂದ ಹೊರಡಲಿದ್ದು, ಮೂರನೇ ದಿನ ಬೆಳಗ್ಗೆ 4:55ಕ್ಕೆ ತಿರುವನಂತಪುರಂ ಸೆಂಟ್ರಲ್ ತಲುಪಲಿದೆ.
ಅದೇ ರೀತಿ ಮಾ.31ರ ಬುಧವಾರ ಮುಂಜಾನೆ 0:30ಕ್ಕೆ ತಿರುವನಂತಪುರಂ ಸೆಂಟ್ರಲ್‌ನಿಂದ ಹೊರಡಲಿದ್ದು, ಮರುದಿನ ರಾತ್ರಿ 10:40ಕ್ಕೆ ಹೊಸದಿಲ್ಲಿಯ ನಿಝಾಮುದ್ದೀನ್ ನಿಲ್ದಾಣ ಮುಟ್ಟಲಿದೆ. ರಾಜ್ಯದಲ್ಲಿ ಈ ರೈಲಿಗೆ ಕಾರವಾರ, ಉಡುಪಿ, ಮಂಗಳೂರು ಜಂಕ್ಷನ್‌ನಲ್ಲಿ ನಿಲುಗಡೆ ಇರುತ್ತದೆ ಎಂದು ಪ್ರಕಟಣೆ ತಿಳಿಸಿದೆ.