×
Ad

ರೈತ ಮಕ್ಕಳಿಗೆ ತೋಟಗಾರಿಕೆ ತರಬೇತಿ

Update: 2021-03-22 20:15 IST

ಉಡುಪಿ, ಮಾ.22: ತೋಟಗಾರಿಕೆ ಇಲಾಖೆ ವತಿಯಿಂದ ರೈತರ ಮಕ್ಕಳಿಗೆ 10 ತಿಂಗಳ ತರಬೇತಿ ಕಾರ್ಯಕ್ರಮವನ್ನು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತೋಟಗಾರಿಕೆ ತರಬೇತಿ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದ್ದು, ತರಬೇತಿ ಪಡೆಯಲು ಆಸಕ್ತರಿಂದ ಅರ್ಜಿ ಗಳನ್ನು ಆಹ್ವಾನಿಸಲಾಗಿದೆ.

ಜಿಲ್ಲೆಯ ಸಾಮಾನ್ಯ ವರ್ಗದ 4 ಹಾಗೂ ಪರಿಶಿಷ್ಟ ಜಾತಿಯ 1 ಒಟ್ಟು ಸೇರಿ 5 ಅ್ಯರ್ಥಿಗಳ ಗುರಿ ಇದ್ದು, ಈ ಗುರಿಯಲ್ಲಿ 4 ಪುರುಷರಿಗೆ ಹಾಗೂ 1 ಮಹಿಳೆಯರಿಗೆ ಮೀಸಲಿರುತ್ತದೆ. ಮಹಿಳೆಯರಿಗಾಗಿ ಮುನಿರಾಬಾದ್ ತರಬೇತಿ ಕೇಂದ್ರ ಕೊಪ್ಪಳ, ಗದಗ ತರಬೇತಿ ಕೇಂದ್ರ ಹಾಗೂ ರಂಗ ಸಮುದ್ರ ತರಬೇತಿ ಕೇಂದ್ರ ಮೈಸೂರು ಇಲ್ಲಿ ಪ್ರತ್ಯೇಕವಾಗಿ ತರಬೇತಿಗೆ ಅವಕಾಶ ಕಲ್ಪಿಸಲಾಗಿದೆ.

ಅರ್ಜಿ ಶುಲ್ಕವು ಸಾಮಾನ್ಯ ಅ್ಯರ್ಥಿಗಳಿಗೆ 30 ರೂ. ಹಾಗೂ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದವರಿಗೆ 15 ರೂ. ಇದ್ದು, ಮೊತ್ತವನ್ನು ಐಪಿಓ/ ಡಿಡಿಯನ್ನು ತೋಟಗಾರಿಕೆ ಉಪನಿರ್ದೇಶಕರು, ಜಿಲ್ಲಾ ಪಂಚಾಯತ್, ಉಡುಪಿ ಇವರ ಹೆಸರಿನಲ್ಲಿ ಪಡೆಯಬೇಕು.

ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಎ.17ರ ಒಳಗೆ ಉಡುಪಿ, ಕುಂದಾಪುರ ಹಾಗೂ ಕಾರ್ಕಳ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸುವಂತೆ ಜಿಲ್ಲಾ ಪಂಚಾಯತ್ ತೋಟಗಾರಿಕೆ ಉಪನಿರ್ದೇಶಕರ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News