×
Ad

ಸೋಮಂತಡ್ಕ : ನೂತನ ಮದ್ರಸ ಕಟ್ಟಡ ಉದ್ಘಾಟನೆ, ಉಪನ್ಯಾಸ ಕಾರ್ಯಕ್ರಮ

Update: 2021-03-22 20:43 IST

ಮುಂಡಾಜೆ : ಇಲ್ಲಿನ ಬದ್ರಿಯ ಜುಮಾ ಮಸ್ಜಿದ್ ಹಾಗು ಎಸ್ಕೆಎಸ್ಸೆಸ್ಸೆಫ್ ಸೋಮಂತಡ್ಕ ಶಾಖೆ ಇದರ ವತಿಯಿಂದ ನೂತನ ಮದ್ರಸ ಕಟ್ಟಡ ಉದ್ಘಾಟನೆ ಹಾಗು ಏಕದಿನ ಧಾರ್ಮಿಕ ಮತ ಪ್ರವಚನ ಕಾರ್ಯಕ್ರಮ ಜಮಾಅತ್ ಆಡಳಿತ ಸಮಿತಿ ಅಧ್ಯಕ್ಷ ಹಾಜಿ ಅಬ್ದುಲ್ ರಝಾಕ್  ಅಧ್ಯಕ್ಷತೆಯಲ್ಲಿ ನಡೆಯಿತು.

 ವಿಧಾನ ಪರಿಷತ್ ಶಾಸಕ ಕೆ ಹರೀಶ್ ಕುಮಾರ್ ಹೈಮಾಸ್ಟ್ ದೀಪ ಉದ್ಘಾಟಿಸಿದರು. ಸ್ಥಳೀಯ ಗೌರವಧ್ಯಕ್ಷರೂ ಪುತ್ತೂರು ಮುದರ್ರಿಸರೂ ಆದ ಸಯ್ಯಿದ್ ಅಹಮದ್ ಪೂಕೋಯ ತಂಙಳ್ ನೂತನ ಮದ್ರಸ ಕಟ್ಟಡ ಉದ್ಘಾಟಿಸಿ ಬದ್ರ್ ಮೌಲಿದ್ ಮಜ್ಲಿಸ್ ಗೆ ನೇತೃತ್ವ ನೀಡಿದರು.

ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಸ್ಥಳೀಯ ಖತೀಬ್ ಅಬ್ದುಲ್ ಹಮೀದ್ ದಾರಿಮಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಮೂಸಾ ದಾರಿಮಿ ಕಕ್ಕಿಂಜೆ ಪ್ರಾಸ್ತಾವಿಕ ಭಾಷಣ ಮಾಡಿದರು.

ಎಸೆಸೆಲ್ಸಿಯಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿ ಸೇರಿ ಹಲವು ಸಾಧಕರಿಗೆ  ಸಯ್ಯಿದ್ ತಂಙಳ್ ರವರು ಸನ್ಮಾನಿಸಿದರು. ಕಕ್ಕಿಂಜೆ ಮುದರ್ರಿಸ್ ಶಂಸುದ್ದೀನ್ ಅಶ್ರಫಿ ಶುಭಾಶಯ ಕೋರಿದರು. ಗುರುಪುರ ಉಳಾಯಿಬೆಟ್ಟು ಮುದರ್ರಿಸ್ ಮುಹಮ್ಮದ್ ಆರಿಫ್ ಬಾಖವಿ ಮುಖ್ಯಭಾಷಣ ಮಾಡಿದರು.

ಎಸ್ಕೆಎಸ್ಸೆಸ್ಸೆಫ್ ಸೋಮಂತಡ್ಕ ಶಾಖೆ ಅಧ್ಯಕ್ಷರಾದ ಅಬೂಬಕ್ಕರ್ ಮುಸ್ಲಿಯಾರ್, ಕೋಶಾಧಿಕಾರಿ ಶಂಸುದ್ದೀನ್ ದಾರಿಮಿ, ಚಿಬಿದ್ರೆ ಮಸ್ಜಿದ್ ಖತೀಬ್ ಮುಹಮ್ಮದ್ ಹನೀಫ್ ಝೈನಿ, ಮನ್ಸೂರ್ ಅಝ್ಹರಿ ಮುಖ್ಯಅತಿಥಿಗಳಾಗಿದ್ದರು.

ಎಸ್ಕೆಎಸ್ಸೆಸ್ಸೆಫ್ ಸೋಮಂತಡ್ಕ ಶಾಖೆ ಇಬಾದ್ ಕಾರ್ಯದರ್ಶಿ ಅಬ್ದುಲ್ ಕರೀಂ ಮುಸ್ಲಿಯಾರ್ ಸ್ವಾಗತಿಸಿ, ಸ್ಥಳೀಯ ಮದ್ರಸ ಅಧ್ಯಾಪಕರಾದ ಶರೀಫ್ ಮುಸ್ಲಿಯಾರ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News