ಹೊಸ ಪಡಿತರ ಚೀಟಿಗಾಗಿ ಅರ್ಜಿ ಆಹ್ವಾನ
ಮಂಗಳೂರು, ಮಾ.22: ದ.ಕ. ಜಿಲ್ಲೆಯಲ್ಲಿ ಪ್ರಸ್ತುತ ಬಿಪಿಎಲ್, ಎಪಿಎಲ್ ಹೊಸ ಪಡಿತರ ಚೀಟಿಗಾಗಿ ಆನ್‌ಲೈನ್ ಮೂಲಕ ಪಡಿತರ ಚೀಟಿ ಕೋರಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ಪಡಿತರ ಚೀಟಿ ಮಾಡಿ ಕೊಡುವುದಾಗಿ ನಂಬಿಸಿ ದುರ್ಲಾಭ ಪಡೆಯುವ ಯಾವುದೇ ರೀತಿಯ ಮಧ್ಯವರ್ತಿಗಳಿಗೆ ಸಾರ್ವಜನಿಕರು ಅವಕಾಶ ಮಾಡಿಕೊಡದೇ ಅರ್ಜಿದಾರರು ನೇರವಾಗಿ ಆಹಾರ ಇಲಾಖಾ ಕಚೇರಿಗಳನ್ನು ಸಂಪರ್ಕಿಸಬೇಕು.
ಮಧ್ಯವರ್ತಿಗಳು ಪಡಿತರ ಚೀಟಿ ಕೊಡಿಸುವ ಬಗ್ಗೆ ದೂರು ಬಂದಲ್ಲಿ ಅಂತಹವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು. ಪಡಿತರ ಚೀಟಿ ಬಗೆಗಿನ ಯಾವುದೇ ಸಂದೇಹಗಳನ್ನು ಸ್ಥಳೀಯ ಆಹಾರ ಶಾಖೆಗಳಲ್ಲಿ ಪರಿಹರಿಸಿಕೊಂಡು ಸೇವಾ ಸೌಲಭ್ಯ ಪಡೆಯಬಹುದಾಗಿದೆ.
ಪಡಿತರ ಚೀಟಿ ಕೋರಿ ಅರ್ಜಿ ಸಲ್ಲಿಸಿದವರು ಅನುಮೋದನೆಗೆ ಅವಕಾಶ ನೀಡಿದ ನಂತರ ತಮ್ಮ ತಾಲೂಕಿನ ಆಹಾರ ಶಾಖೆಗಳಾದ ಮಂಗಳೂರು ನಗರ- 0824-2423622, ಮಂಗಳೂರು ತಾಲೂಕು- 0824-2412033, ಬಂಟ್ವಾಳ ತಾಲೂಕು- 08255-232125, ಪುತ್ತೂರು ತಾಲೂಕು - 08251-231349, ಬೆಳ್ತಂಗಡಿ ತಾಲೂಕು- 08256-232383, ಸುಳ್ಯ ತಾಲೂಕು- 08257-231330ನ್ನು ಸಂಪರ್ಕಿಸಬಹುದಾಗಿದೆ ಎಂದು ಆಹಾರ , ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.