ಮೀನುಗಾರಿಕಾ ದೋಣಿ ನಿರ್ಮಾಣಕ್ಕೆ ಪ್ರಮಾಣಪತ್ರ ಪಡೆಯಲು ಅವಕಾಶ
Update: 2021-03-22 20:54 IST
ಮಂಗಳೂರು, ಮಾ.22: ದ.ಕ. ಜಿಲ್ಲೆಯಲ್ಲಿ ಯಾಂತ್ರೀಕೃತ ಮೀನುಗಾರಿಕೆ ದೋಣಿಗಳ ನಿರ್ಮಾಣಕ್ಕೆ ಸಾಧ್ಯತಾ ಪತ್ರ ಪಡೆಯಲು ಮೀನುಗಾರಿಕೆ ಇಲಾಖೆಗೆ ಅರ್ಜಿ ಸಲ್ಲಿಸಲು ಮರು ಅವಕಾಶ ಕಲ್ಪಿಸಲಾಗಿದೆ.
2016ನೇ ನವೆಂಬರ್ 21ರೊಳಗೆ ಅರ್ಜಿ ಸಲ್ಲಿಸಿದ ಅರ್ಜಿದಾರರರು ನಿಯಮಾನುಸಾರ ಸಂಬಂಧಿತ ವಿಧಾನಸಭಾ ಕ್ಷೇತ್ರದ ಶಾಸಕರ ಶಿಫಾರಸು ಪತ್ರ ಹಾಗೂ ನಿಗದಿತ ಶುಲ್ಕ, ಅಗತ್ಯ ದಾಖಲಾತಿಗಳ ಜೊತೆಗೆ ಈ ಬಗ್ಗೆ ನಿರ್ಮಾಣ ಹಂತದ ಮಾಹಿತಿ ಸಲ್ಲಿಸಬೇಕು.
ಈಗಾಗಲೇ ಸಾಧ್ಯತಾ ಪತ್ರ ಪಡೆದು ಇನ್ನೂ ದೋಣಿ ನಿರ್ಮಿಸಲು ಸಾಧ್ಯವಾಗಿಲ್ಲದ ಅರ್ಜಿದಾರರಿಗೂ ಸರಕಾರದ ಆದೇಶದಂತೆ ಸಾಧ್ಯತಾ ಪತ್ರದ ಅವಧಿ ವಿಸ್ತರಣೆಗೆ ಅವಕಾಶ ಕಲ್ಪಿಸಲಾಗಿದೆ. ಅರ್ಜಿದರರು ಪ್ರಸ್ತುತ ಸಾಲಿನ ಎಪ್ರಿಲ್ 10ರೊಳಗೆ ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಮೀನುಗಾರಿಕೆ ಹಿರಿಯ ಸಹಾಯಕ ನಿರ್ದೇಶಕರು, ದ.ಕ. ಜಿಪಂ ಕಚೇರಿ ಕಟ್ಟಡ, 2ನೇ ಮಹಡಿ, ಉರ್ವಸ್ಟೋರ್, ಮಂಗಳೂರು ಅಥವಾ ದೂ.ಸಂ.: 0824-2451292ನ್ನು ಸಂಪರ್ಕಿಸಲು ಪ್ರಕಟನೆ ತಿಳಿಸಿದೆ.