ಪಿಂಗಾರಕ್ಕೆ ತುಳು ಚಲನಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ
ಮಂಗಳೂರು : 2019ನೆ ಸಾಲಿನ 67ನೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಭಾಗದಲ್ಲಿ ಪಿಂಗಾರ ಅತ್ಯತ್ತಮ ತುಳು ಚಲನಚಿತ್ರ ಪ್ರಶಸ್ತಿಗೆ ಆಯ್ಕೆಯಾಗಿದೆ.
ನಿರ್ದೇಶಕ ಆರ್ .ಪ್ರೀತಂ ಶೆಟ್ಟಿ ನಿರ್ದೇಶನದ ಪಿಂಗಾರ ಸಿನಿಮಾಕ್ಕೆ ಇದೀಗ ರಾಷ್ಟ್ರ ಪ್ರಶಸ್ತಿ ಲಭಿಸಿದೆ. ತುಳುನಾಡಿನ ದೈವಾರಾಧನೆ ಮತ್ತು ಅದರ ಸುತ್ತ ಒಳಗೊಂಡಿರುವ ನಂಬಿಕೆ,ದೈವದ ನುಡಿ ಯೊಂದಿಗೆ ಬೆಳೆದು ಬಂದ ಶ್ರದ್ಧೆ,ಭಕ್ತಿ ಯೊಂದಿಗೆ ಸೇರಿಕೊಂಡಿರುವ ತುಳುವರ ಬದುಕು ಸಂಸ್ಕೃತಿ, ದೈವದ ಪಾತ್ರಿಯ ದೈವಿಕ ನುಡಿಗಳನ್ನು ಅಲೌಕಿಕ ಶಕ್ತಿಯ ಆಜ್ಞೆಯೆಂದು ಪಾಲಿಸುತ್ತಾ ಬಂದಿರುವ ವ ತುಳುವರ ಸಾಮಾಜಿಕ ಮತ್ತು ಧಾರ್ಮಿಕ ಬದುಕಿನ ಸುತ್ತ ಹೆಣಿದುಕೊಂಡ ಕಥೆ ಪಿಂಗಾರ ಚಲನ ಚಿತ್ರದ್ದಾಗಿದೆ.
ಈ ಚಲನ ಚಿತ್ರದ ನಿರ್ಮಾಪಕರಾಗಿ ಅವಿನಾಶ್ ಯು ಶೆಟ್ಟಿ, ಮಂಜುನಾಥ್ ರೆಡ್ಡಿ, ಛಾಯಾಗ್ರಾಹಕರಾಗಿ, ವಿ ಪವನ್ ಕುಮಾರ್ ನಡೆಸಿದ್ದಾರೆ. ಕಲಾವಿದರಾಗಿ ನೀಮಾ ರೇ, ಶರಣ್ ಶೆಟ್ಟಿ, ಉಷಾ ಭಂಡಾರಿ, ಸಿಂಚನಾ ಚಂದ್ರಮೋಹನ್, ಸುನಿಲ್ ನೆಲ್ಲಿಗುಡ್ಡೆ, ರಂಜಿತ್ ಸುವರ್ಣ, ಪ್ರಶಾಂತ್ ಸಿ ಕೆ.ಭಾಗವಹಿಸಿದ್ದರು.