ಕೆಐಸಿ ದುಬೈ ಸಮಿತಿ: ವಾರ್ಷಿಕ ಮಹಾಸಭೆ, ಪದಾಧಿಕಾರಿಗಳ ಆಯ್ಕೆ

Update: 2021-03-22 18:18 GMT

ದುಬೈ: ಕೆಐಸಿ ದುಬೈ ಸಮಿತಿ ಇದರ ವಾರ್ಷಿಕ ಮಹಾ ಸಭೆಯು ಓರಿಯೆಂಟಲ್ ಕಾರ್ನರ್ ಹೋಟೆಲ್ ಸಭಾಂಗಣದಲ್ಲಿ  ಅಶ್ರಫ್ ಷಾ ಮಾಂತೂರ್ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆಯಿತು.

ಸುಲೈಮಾನ್ ಉಸ್ತಾದ್ ಕಲ್ಲೆಗ ಅವರ ದುಆ ದೊಂದಿಗೆ ಕಾರ್ಯ ಕ್ರಮಕ್ಕೆ ಚಾಲನೆ ನೀಡಲಾಯಿತು, ಸ್ವಾಗತ ಭಾಷಣದ ಮೂಲಕ ಮಾತನಾಡಿದ ಹಮೀದ್ ಮುಸ್ಲಿಯಾರ್ ರವರು ಇಸ್ರಾ ಮಿಹ್ರಾಜ್ ರಾತ್ರಿಯ ವಿಶೇಷತೆಗಳನ್ನುವಿವರಿಸಿ, ಕೆ ಐ ಸಿ ದುಬೈ ಸಮಿತಿಯ ಕಾರ್ಯ ವೈಖರಿಗಳನ್ನು ಪ್ರಶಂಸಿಸಿದರು.ಸಯ್ಯದ್ ಅಸ್ಕರ್ ಅಲಿ ತಂಙಳ್ ಸಭಾ ಕಾರ್ಯಕ್ರವನ್ನು ಉದ್ಘಾಟಿಸಿದರು, ವಾರ್ಷಿಕ ವರದಿಯನ್ನು ಕಾರ್ಯದರ್ಶಿ ಅಶ್ರಫ್ ಪರ್ಲಡ್ಕ ವಾಚಿಸಿದರು. ಲೆಕ್ಕ ಪತ್ರವನ್ನು ನಾಸಿರ್ ಬಪ್ಪಳಿಗೆ ಮಂಡಿಸಿದರು.

ಈ ಸಂದರ್ಭ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ನೂತನ ಸಮಿತಿಯ ಜವಾಬ್ದಾರಿಯನ್ನು ಕೆ ಐ ಸಿ ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ನೂರ್ ಮುಹಮ್ಮದ್ ನೀರ್ಕಜೆಗೆ ನೀಡಲಾಯಿತು.

ಗೌರವಾಧ್ಯಕ್ಷರಾಗಿ ಅಶ್ರಫ್ ಷಾ ಮಾಂತೂರು, ನೂತನ ಅಧ್ಯಕ್ಷರಾಗಿ ಅಶ್ರಫ್ ಆರ್ತಿಕೆರೆ, ಪ್ರಧಾನ ಕಾರ್ಯ ದರ್ಶಿಯಾಗಿ ಆರಿಫ್ ಕೂರ್ನಡ್ಕ, ಕಾರ್ಯಾಧ್ಯಕ್ಷರಾಗಿ ಅಬ್ದುಲ್ ಸಲಾಂ ಬಪ್ಪಳಿಗೆ, ಕೋಶಾಧಿಕಾರಿಯಾಗಿ ಆಸಿಫ್ ಮರೀಲ್, ಸಂಘಟನಾ ಕಾರ್ಯದರ್ಶಿಯಾಗಿ ಅಶ್ರಫ್ ಪರ್ಲಡ್ಕ ಹಾಗು ಕಾರ್ಯಕಾರಿ ಸಮಿತಿ ಸದಸ್ಯರನ್ನು ಆರಿಸಲಾಯಿತು. ಚುನಾವಣಾ ಅಧಿಕಾರಿ ನೂರ್ ಮುಹಮ್ಮದ್ ನೂತನ ಸಮಿತಿಗೆ ಶುಭ ಹಾರೈಸಿದರು.

ಕೆ ಐ ಸಿ ಕೇಂದ್ರ ಸಮಿತಿ ಅಧ್ಯಕ್ಷ ಹಾಜಿ ಮೊಹಿದೀನ್ ಕುಟ್ಟಿ, ಕೆ ಐ ಸಿ ಕೇಂದ್ರ ಸಮಿತಿ ಕೋಶಾಧಿಕಾರಿ ಸುಲೈಮಾನ್ ಮೌಲವಿ ಕಲ್ಲೆಗ, ಕೇಂದ್ರ  ಸಮಿತಿ ಉಪಾಧ್ಯಕ್ಷರಾದ ಷರೀಫ್ ಕಾವು, ಶಾರ್ಜಾ ಸಮಿತಿ ಕಾರ್ಯಾಧ್ಯಕ್ಷರಾದ ಅಬ್ದುಲ್ ಖಾದರ್ ಬೈತಡ್ಕ ಮಾತನಾಡಿ,ಶುಭ ಹಾರೈಸಿದರು.

ಅಶ್ರಫ್ ಪರ್ಲಡ್ಕ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News