×
Ad

ಅಸ್ವಸ್ಥಗೊಂಡ ಚಾಲಕ : ಚಾರ್ಮಾಡಿ ಘಾಟ್‌ನಲ್ಲಿ ಚರಂಡಿಗೆ ಮಗುಚಿದ ಸರಕಾರಿ ಬಸ್

Update: 2021-03-23 22:18 IST

ಬೆಳ್ತಂಗಡಿ, ಮಾ.23: ಚಾರ್ಮಾಡಿ ಘಾಟ್ ರಸ್ತೆಯ 3ನೇ ತಿರುವಿನಲ್ಲಿ ಸರಕಾರಿ ಬಸ್ಸೊಂದರ ಚಾಲಕ ಹಠಾತ್ ಅಸ್ವಸ್ಥಗೊಂಡ ಕಾರಣ ಬಸ್ ಚರಂಡಿಗೆ ವಾಲಿನಿಂತ ಘಟನೆ ಮಂಗಳವಾರ ಸಂಜೆ ವೇಳೆ ನಡೆದಿದೆ.

ಈ ವೇಳೆ ಬಸ್ಸಿನಲ್ಲಿ ಸುಮಾರು 40 ರಷ್ಟು ಪ್ರಯಾಣಿಕರಿದ್ದು, ಯಾವುದೇ ಅಪಾಯಗಳಿಲ್ಲದೆ ಪಾರಾಗಿದ್ದಾರೆ.

ಆರೋಗ್ಯ ಸಮಸ್ಯೆ ಕಾಣಿಸಿಕೊಂಡು ದೇಹ ಶಕ್ತಿಕುಂದುತ್ತಿರುವುದನ್ನು ಮನಗಂಡ ಬಸ್ ಚಾಲಕ ಬಸ್ಸನ್ನು ಪಕ್ಕಕ್ಕೆ ಸರಿಸಿ ನಿಲ್ಲಿಸಿದ್ದರಿಂದ ಬಸ್ಸು ಚರಂಡಿಗೆ ವಾಲಿ ನಿಂತಿದೆ. ಬಸ್ ಮತ್ತೂ ಮುಂದಕ್ಕೆ ಚಲಿಸಿದ್ದಲ್ಲಿ ಅನಾಹುತ ಸಂಭವಿಸುತ್ತಿತ್ತ. ಅನಾರೋಗ್ಯದ ನಡುವೆಯೂ ಬಸ್ ಚಾಲಕ ಸಮಯ ಪ್ರಜ್ಞೆ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.

ಅಪಘಾತದ ವಿಚಾರ ಅರಿತ ಸಮಾಜ ಸೇವಕ ಚಾರ್ಮಾಡಿ ಹಸನಬ್ಬ ಸ್ಥಳಕ್ಕೆ ಧಾವಿಸಿ ಚಾಲಕನನ್ನು ತಕ್ಷಣ ಉಜಿರೆಯ ಆಸ್ಪತ್ರೆಗೆ ಕರೆತಂದು ಪ್ರಥಮ ಚಿಕಿತ್ಸೆ ಕೊಡಿಸಿದ್ದಾರೆ. ಬಸ್ಸಿನಲ್ಲಿದ್ದ ಪ್ರಯಾಣಿಕರಿಗೆ ಪ್ರಯಾಣಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News