ಮುಖ್ಯಮಂತ್ರಿ ಪದಕಕ್ಕೆ ಉಡುಪಿ ಜಿಲ್ಲೆಯ ಮೂವರು ಆಯ್ಕೆ
ಉಡುಪಿ, ಮಾ.23: ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ರಾಮಚಂದ್ರ ನಾಯಕ್ ಮತ್ತು ಉಡುಪಿ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಎಎಚ್‌ಸಿ ಶಂಕರ್, 2020ನೆ ಸಾಲಿನ ಮುಖ್ಯಮಂತ್ರಿ ಪದಕಕ್ಕೆ ಆಯ್ಕೆಯಾಗಿದ್ದಾರೆ.
ಬಾರಕೂರು ಮೂಲದ ರಾಮಚಂದ್ರ ನಾಯಕ್, 2003ರಲ್ಲಿ ಎಸ್ಸೈಯಾಗಿ ಪೊಲೀಸ್ ಇಲಾಖೆಗೆ ಸೇರ್ಪಡೆಗೊಂಡಿದ್ದು, ಗದಗ, ಬೆಂಗಳೂರು, ಬಳ್ಳಾರಿ, ಉಡುಪಿ, ಮಂಗಳೂರಿನಲ್ಲಿ ಎಸ್ಸೈಯಾಗಿ ಕರ್ತವ್ಯ ನಿರ್ವಹಿಸಿದ್ದರು. 2011ರಲ್ಲಿ ಪೊಲೀಸ್ ನಿರೀಕ್ಷಕರಾಗಿ ಭಡ್ತಿ ಹೊಂದಿದ್ದ ಇವರು, ಕಾರ್ಕಳ ಎಎನ್‌ಎಫ್, ಹೊಸನಗರ, ಮುಲ್ಕಿ ಮೂಡಬಿದ್ರೆಯಲ್ಲಿ ವೃತ್ತ ನಿರೀಕ್ಷಕರಾಗಿ ಮತ್ತು ಕಾರವಾರ ಸೈಬರ್ ಕ್ರೈಮ್ ಆಗಿ ಕರ್ತವ್ಯ ನಿರ್ವಹಿಸಿದ್ದರು.
ಅದೇ ರೀತಿ ಬೈಂದೂರು ಮೂಲದ ಪ್ರಸ್ತುತ ಎಸ್‌ಐಟಿ ಲೋಕಾಯುಕ್ತ ಬೆಂಗಳೂರಿನಲ್ಲಿ ಪೊಲೀಸ್ ನಿರೀಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ರಾಘವೇಂದ್ರ ಬೈಂದೂರು ಕೂಡ 2020ನೆ ಸಾಲಿನ ಮುಖ್ಯಮಂತ್ರಿ ಪದಕಕ್ಕೆ ಆಯ್ಕೆಯಾಗಿದ್ದಾರೆ.
ಅದೇ ರೀತಿ ಬೈಂದೂರು ಮೂಲದ ಪ್ರಸ್ತುತ ಎಸ್‌ಐಟಿ ಲೋಕಾಯುಕ್ತ ಬೆಂಗಳೂರಿನಲ್ಲಿ ಪೊಲೀಸ್ ನಿರೀಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ರಾಘವೇಂದ್ರ ಬೈಂದೂರು ಕೂಡ 2020ನೆ ಸಾಲಿನ ಮುಖ್ಯಮಂತ್ರಿ ಪದಕಕ್ಕೆ ಆಯ್ಕೆಯಾಗಿದ್ದಾರೆ.