×
Ad

ಮಣಿಪಾಲ ಎಂಐಟಿಯಲ್ಲಿ ಕೊರೋನ ನಿಯಂತ್ರಣ: ಡಿಸಿ ಜಗದೀಶ್

Update: 2021-03-23 22:33 IST

ಉಡುಪಿ, ಮಾ.23: ಕೊರೋನಾ ಕಂಡುಬಂದಿರುವ ಕುರ್ಕಾಲು ಮತ್ತು ಕಾರ್ಕಳದ ಶಿಕ್ಷಣ ಸಂಸ್ಥೆಗಳಲ್ಲಿ ಯಾವುದೇ ಕಂಟೈನ್‌ಮೆಂಟ್ ವಲಯಗಳನ್ನು ವಿಧಿಸಿಲ್ಲ. ಅಲ್ಲಿ ಯಾವುದೇ ರೀತಿಯ ಆಫ್‌ಲೈನ್ ತರಗತಿ ಮಾಡದಂತೆ ಸೂಚನೆ ನೀಡಲಾಗಿದೆ. ಸದ್ಯ ಮಣಿಪಾಲ ಎಂಐಟಿ ನಿಯಂತ್ರಣದಲ್ಲಿದೆ. ಇಂದು ಕೇವಲ ಏಳು ಪ್ರಕರಣ ಮಾತ್ರ ಪತ್ತೆಯಾಗಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.

ಉಡುಪಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಎಂಐಟಿಯಲ್ಲಿರುವ ಎಲ್ಲ 5000 ಮಕ್ಕಳನ್ನು ಟೆಸ್ಟ್ ಮಾಡಲಾಗುತ್ತದೆ. ಈವರೆಗೆ 4000 ವಿದ್ಯಾರ್ಥಿಗಳನ್ನು ಪರೀಕ್ಷೆ ಮಾಡಲಾಗಿದೆ. ಇನ್ನು ಒಂದು ಸಾವಿರ ವಿದ್ಯಾರ್ಥಿಗಳ ಪರೀಕ್ಷೆ ಬಾಕಿ ಇದೆ. ಅಲ್ಲಿನ ಎಲ್ಲರನ್ನು ಪರೀಕ್ಷೆಗೆ ಒಳಪಡಿಸಿ, ಶೀಘ್ರವೇ ಎಂಐಟಿಯನ್ನು ಕೊರೋನಾ ಮುಕ್ತ ಮಾಡಲಾಗುವುದು ಎಂದರು.

ಇವತ್ತು ನಗರದಲ್ಲಿ ಸಾರ್ವಜನಿಕರಿಗೆ ಕೇವಲ ದಂಡ ಮಾತ್ರ ವಿಧಿಸಲಾಗಿದೆ. ಇನ್ನು ಮುಂದೆ ಮಾಸ್ಕ್ ಧರಿಸದೆ ಸಾರ್ವಜನಿಕರ ಜೀವದ ಜೊತೆ ಆಟ ಆಡುವವರ ವಿರುದ್ಧ ದಂಡದ ಜೊತೆಗೆ ಕ್ರಿಮಿನಲ್ ಮೊಕದ್ದಮೆ ಕೂಡ ದಾಖಲಿ ಸಲಾಗುವುದು. ಯಾವುದೇ ಸಮಾರಂಭವನ್ನು ಮಾಡಬೇಕಾದರೂ ಅನುಮತಿ ಕಡ್ಡಾಯವಾಗಿ ಪಡೆಯಬೇಕು. ಸಾರ್ವಜನಿಕ ಹಾಗೂ ಖಾಸಗಿ ಕಾರ್ಯಕ್ರಮ ಗಳಲ್ಲಿ ನಿಯಮ ಉಲ್ಲಂಘನೆ ಕಂಡುಬಂದರೆ ಆ ಕಾರ್ಯಕ್ರಮದ ಉಸ್ತುವಾರಿ ವಹಿಸಿರುವ ಅಧಿಕಾರಿಗಳ ವಿರುದ್ಧ ಕೂಡ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.

ರಾಜ್ಯ ಸರಕಾರದ ಮಾರ್ಗಸೂಚಿ ಎಲ್ಲ ಧಾರ್ಮಿಕ, ಖಾಸಗಿ, ಸರಕಾರಿ ಕಾರ್ಯಕ್ರಮಗಳಿಗೂ ಅನ್ವಯಿಸುತ್ತದೆ. ಸಾರ್ವಜನಿಕರು ಕೈಜೋಡಿಸಿದರೆ ಕೊರೋನಾ ನಿಯಂತ್ರಣ ಮಾಡಲು ಸಾಧ್ಯವಾಗುತ್ತದೆ. ಸದ್ಯಕ್ಕೆ ಲಾಕ್‌ಡೌನ್ ಮಾಡುವ ಅಗತ್ಯ ಇಲ್ಲ. ಶೋಭಾಯಾತ್ರೆ, ಪ್ರತಿಭಟನೆಗಳಿಗೆ ಯಾವುದೇ ನಿರ್ಬಂಧ ಇಲ್ಲ. ಆದರೆ ಅಲ್ಲಿಯೂ ಕೋವಿಡ್ -19 ಮಾರ್ಗಸೂಚಿ ಪಾಲಿಸಬೇಕಾಗುತ್ತದೆ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News