ಗಾಂಜಾ ಮಾರಾಟ: ಇಬ್ಬರ ಬಂಧನ
Update: 2021-03-23 22:40 IST
ಉಡುಪಿ, ಮಾ.23: ನಿಟ್ಟೂರು ಆಭರಣ ಶೋರೂಮಿನ ಹಿಂಭಾಗದ ಶ್ರೀಮೂಕಾಂಬಿಕಾ ಪಾಲಿ ಪ್ರಾಡ್ಟಕ್ಸ್ ಎದುರು ರಸ್ತೆಯಲ್ಲಿ ಮಾ.22ರಂದು ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಇಬ್ಬರನ್ನು ಉಡುಪಿ ನಗರ ಪೊಲೀಸರು ಬಂಧಿಸಿದ್ದಾರೆ.
ಗೌತಮ್ ಮತ್ತು ವಿಜಿತ್ ಬಂಧಿತ ಆರೋಪಿಗಳು. ಇವರಿಂದ 4,500 ರೂ. ಮೌಲ್ಯದ 150 ಗ್ರಾಂ ಗಾಂಜಾ, ಎರಡು ಮೊಬೈಲ್ ಗಳು ಹಾಗೂ 720ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು ಗಾಂಜಾವನ್ನು ಮಂಗಳೂರಿನ ನವೀನ್ ಎಂಬಾತನಿಂದ ಖರೀದಿಸಿ ತಂದಿರುವುದಾಗಿ ತಿಳಿಸಿದ್ದಾರೆ.
ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.