ಕುತ್ತಾರ್: ಹ್ಯೂಮಾನಿಟಿ ಫೌಂಡೇಶನ್ ನಿಂದ ಸಾಧಕರಿಗೆ ಸನ್ಮಾನ
Update: 2021-03-24 13:56 IST
ಉಳ್ಳಾಲ, ಮಾ.24: ಹ್ಯೂಮಾನಿಟಿ ಫೌಂಡೇಶನ್ ಮಂಗಳೂರು ಇದರ ಆಶ್ರಯದಲ್ಲಿ ವಿವಿಧ ಕ್ಷೇತ್ರಗಳಲ್ಲಿನ ಸಾಧಕರಿಗೆ ಗೌರವ ಸನ್ಮಾನ ಕಾರ್ಯಕ್ರಮವು ಕುತ್ತಾರಿನ ಮೆಟ್ರೊ ಪ್ಲಾಝಾದಲ್ಲಿ ನಡೆಯಿತು.
ರೋಗಿಗಳ, ಅಶಕ್ತರ ಸೇವೆಯಲ್ಲಿ ತೊಡಗಿಸಿಕೊಂಡಿರುವ ಸಮಾಜ ಸೇವಕರಾದ ಮುನೀರ್ ಬಾವ, ನರಿಂಗಾನ ಗ್ರಾಮ ಪಂಚಾಯತ್ ನಲ್ಲಿ ಎರಡನೇ ಬಾರಿಗೆ ಸದಸ್ಯರಾಗಿ ಆಯ್ಕೆಯಾದ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿ ಕೊಂಡಿರುವ ಅಬ್ದುಲ್ ರಹಿಮಾನ್ ಚಂದಹಿತ್ಲು ಹಾಗು ಬೆಳ್ಮ ಗ್ರಾಮ ಪಂಚಾಯತ್ ಗೆ ಮೊದಲ ಬಾರಿಗೆ ಆಯ್ಕೆಯಾದ ಇಕ್ಬಾಲ್ ಎಚ್. ಆರ್.ರನ್ನು ಸಂಸ್ಥೆಯ ಅಧ್ಯಕ್ಷ ನಾಸಿರ್ ಸಾಮಾನಿಗೆ ನೇತೃತ್ವದಲ್ಲಿ ಸನ್ಮಾನಿಸಲಾಯಿತು
ಕಾರ್ಯಕ್ರಮದಲ್ಲಿ ಪ್ರ. ಕಾರ್ಯದರ್ಶಿ ಹಮೀದ್ ಪಜೀರ್, ಕೋಶಾಧಿಕಾರಿ ಇಲ್ಯಾಸ್ ಚಾರ್ಮಾಡಿ,
ಖಲಂದರ್ ಪರ್ತಿಪ್ಪಾಡಿ, ಆಸಿಫ್ ಕುತ್ತಾರ್, ಶಂಶೀರ್ ಕುತ್ತಾರ್, ಸೈಫುಲ್ಲಾ ಸೋಮೇಶ್ವರ, ಝಮೀರ್ ತೊಕ್ಕೊಟ್ಟು,
ಹಫೀಝ್ ದೇರಳಕಟ್ಟೆ ಉಪಸ್ಥಿತರಿದ್ದರು.