ರಾಷ್ಟ್ರೀಯ ಜೂನಿಯರ್ ಕಬಡ್ಡಿ ಪಂದ್ಯಾಟ: ಕರ್ನಾಟಕ ತಂಡದ ನಾಯಕಿಯಾಗಿ ಉಜಿರೆಯ ಅರ್ಚನಾ ಗೌಡ ಆಯ್ಕೆ
Update: 2021-03-24 15:04 IST
ಬೆಳ್ತಂಗಡಿ, ಮಾ.24: ತೆಲಂಗಾಣದಲ್ಲಿ ನಡೆಯಲಿರುವ ರಾಷ್ಟ್ರೀಯ ಜೂನಿಯರ್ ಕಬಡ್ಡಿ ಪಂದ್ಯಾಟದಲ್ಲಿ ಸ್ಪರ್ಧಿಸುವ ಕರ್ನಾಟಕ ತಂಡದ ನಾಯಕಿಯಾಗಿ ಉಜಿರೆಯ ಅರ್ಚನಾ ಗೌಡ ಆಯ್ಕೆಯಾಗಿದ್ದಾರೆ.
ಅರ್ಚನಾ ಗೌಡ ಆರು ಬಾರಿ ರಾಷ್ಟ್ರಮಟ್ಟದ ಕಬ್ಬಡ್ಡಿ ಪಂದ್ಯಾಟದಲ್ಲಿ ಸ್ಪರ್ಧಿಸಿದ ಅನುಭವಿಯಾಗಿದ್ದಾರೆ. ಇವರು ವಗ್ಗ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಹಳೆ ವಿದ್ಯಾರ್ಥಿನಿಯಾಗಿದ್ದು, ಪ್ರಸಕ್ತ ಮೂಡುಬಿದಿರೆಯ ಆಳ್ವಾಸ್ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದಾರೆ.
ಇವರು ಉಜಿರೆ ಗ್ರಾಮದ ಗುರಿಪಳ್ಳ ನಿವಾಸಿ ಸದಾಶಿವ ಗೌಡ ಮತ್ತು ಶೀಲಾವತಿ ದಂಪತಿಯ ಪುತ್ರಿ.