×
Ad

ಕೊಕ್ಕಡ ಪ್ರೌಢಶಾಲಾ ಮುಖ್ಯೋಪಾಧ್ಯಾಯರಿಗೆ ರಜೆ ಮೇಲೆ ತೆರಳಲು ಸೂಚನೆ, ತನಿಖೆಗೆ ಆದೇಶ

Update: 2021-03-24 19:04 IST

ಬೆಳ್ತಂಗಡಿ: ಕೊಕ್ಕಡ ಪ್ರೌಢ ಶಾಲೆಯ ವಿದ್ಯಾರ್ಥಿಗಳನ್ನು ಮಸೀದಿ ಉದ್ಘಾಟನೆ ಕಾರ್ಯಕ್ರಮಕ್ಕೆ ಕರೆದುಕೊಂಡು ಹೋದ ಪ್ರಭಾರ ಮುಖ್ಯ ಶಿಕ್ಷಕ ದಿನೇಶ್ ರವರಿಗೆ ಕಡ್ಡಾಯ ರಜೆ ನೀಡಿ ಇಲಾಖೆ ಆದೇಶ ನೀಡಿದೆ ಹಾಗೂ ಘಟನೆಯ ಬಗ್ಗೆ ಸಮಗ್ರವಾದ  ತನಿಖೆ ನಡೆಸಲು ಜಿಲ್ಲಾ ಉಪಯೋಜನಾಧಿಕಾರಿ ಮಂಜುಳಾ ಅವರನ್ನು ನೇಮಿಸಿದೆ.

ಕೊಕ್ಕಡದಲ್ಲಿ ನವೀಕರಣಗೊಂಡ ನೂತನ ಮಸೀದಿಯ ಉದ್ಘಾಟನೆ ಮಾರ್ಚ್ 20 ರಂದು ನಡೆದಿತ್ತು. ಉದ್ಘಾಟನಾ ಸಮಾರಂಭದ ಆಮಂತ್ರಣವನ್ನು ಮಸೀದಿ ಆಡಳಿತ ಮಂಡಳಿಯವರು ಶಾಲೆಯವರಿಗೂ ನೀಡಿದ್ದರು. ಮುಖ್ಯ ಶಿಕ್ಷಕರು ಮಸೀದಿಯವರ ಆಮಂತ್ರಣ  ಸ್ವೀಕರಿಸಿ  ಸರಕಾರಿ ಶಾಲೆಯ ಮಕ್ಕಳನ್ನು  ಕರೆದುಕೊಂಡು  ಮಸೀದಿಗೆ ಹೋಗಿದ್ದರು.  ಈ ವಿಚಾರಕ್ಕೆ ಸಂಬಂಧಿಸಿದಂತೆ ಭಜರಂಗದಳ ಹಾಗೂ ಕೆಲ ಸಂಘಟನೆಯವರು ಮುಖ್ಯೋಪಾಧ್ಯಾಯರನ್ನು ತರಾಟೆಗೆ ತೆಗೆದುಕೊಂಡ ಆಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. 
  
ಕ್ಷೇತ್ರ ಶಿಕ್ಷಣಾಧಿಕಾರಿಯವರು ನೀಡಿದ ಮಾಹಿತಿಯಂತೆ ಶಾಲಾ ನಿಯಮಗಳನ್ನು ಮೀರಿ ಮಕ್ಕಳನ್ನು ಖಾಸಗಿ ಕಾರ್ಯಕ್ರಮಕ್ಕೆ ಕರೆದುಕೊಂಡು ಹೋಗಿರುವ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ಸೂಚನೆ ನೀಡಲಾಗಿದೆ. ಹಾಗೂ ಅವರನ್ನು 10 ದಿನಗಳ ಕಡ್ಡಾಯ ರಜೆಯಲ್ಲಿ ತೆರಳುವಂತೆ ಸೂಚಿಸಿದೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News