ಉಡುಪಿ: ಮಾ.29ರಿಂದ ಮುರಾರಿ-ಕೆದ್ಲಾಯ ರಂಗೋತ್ಸವ
ಉಡುಪಿ, ಮಾ.24: ಉಡುಪಿಯ ಸಾಂಸ್ಕೃತಿಕ ವೇದಿಕೆ ರಥಬೀದಿ ಗೆಳೆಯರು ಆಶ್ರಯದಲ್ಲಿ ಮಾ.29ರಿಂದ 31ರವರೆಗೆ ಪ್ರತಿದಿನ ಸಂಜೆ 7 ಗಂಟೆಗೆ ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ಡಾ.ನಿ.ಮುರಾರಿ ಬಲ್ಲಾಳ್ ಮತ್ತು ಪ್ರೊ.ಕೆ.ಎಸ್. ಕೆದ್ಲಾಯ ನೆನಪಿನ ಮುರಾರಿ-ಕೆದ್ಲಾಯ ರಂಗೋತ್ಸವ ಜರಗಲಿದೆ.
ರಂಗೋತ್ಸವ ಮಾ.29ರ ಸೋಮವಾರ ಸಂಜೆ 6:15ಕ್ಕೆ ಉದ್ಘಾಟನೆಗೊಳ್ಳಲಿದ್ದು, ಮಂಗಳೂರಿನ ಹಿರಿಯ ರಂಗಕರ್ಮಿ ಚಂದ್ರಹಾಸ್ ಉಲ್ಲಾಳ್ ಉದ್ಘಾಟನೆ ನೆರವೇರಿಸ ಲಿದ್ದಾರೆ. ಮುಖ್ಯ ಅತಿಥಿಗಳಾಗಿ ಉಡುಪಿ ಎಂ.ಜಿ.ಎಂ. ಕಾಲೇಜಿನ ಪ್ರಾಂಶುಪಾಲ ಡಾ. ದೇವಿದಾಸ್ ಎಸ್. ನಾಯ್ಕ ಭಾಗವಹಿಸಲಿದ್ದಾರೆ. ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಪ್ರೊ. ಮುರಳೀಧರ ಉಪಾಧ್ಯ ಹಿರಿಯಡ್ಕ ವಹಿಸಲಿದ್ದಾರೆ.
ನಂತರ ಮಣಿಪಾಲದ ಸಂಗಮ ಕಲಾವಿದೆರ್ ಇವರಿಂದ ಮೂಕ ನರ್ತಕ ( ರಚನೆ: ಆಸೀಫ್ ಕರೀಮ್ ಬೊಯ್, ಪರಿಷ್ಕರಣೆ ಮತ್ತು ಅನುವಾದ: ಕೆ. ಆರ್. ಓಂಕಾರ್, ನಿರ್ದೇಶನ: ಭುವನ್ ಮಣಿಪಾಲ) ನಾಟಕ ಪ್ರದರ್ಶನಗೊಳ್ಳಲಿದೆ.
ಮಾ.30ರ ಮಂಗಳವಾರ ಥಿಯೇಟರ್ ಸಮುರಾಯ್ ಪುರಪ್ಪೆಮನೆ ಇವರಿಂದ ವಾಮನ ಮಾಸ್ತರರ ವೀರ ಅಭಿಮನ್ಯು ಆಧಾರಿತ ಮಹಾಭಾರತ ಪದ್ಯವ್ಯೆಹ (ಪರಿಕಲ್ಪನೆ -ನಿರ್ದೇಶನ: ಸಾಲಿಯನ್ ಉಮೇಶ್ ನಾರಾಯಣ ಮತ್ತು ರಾಘು ಪುರಪ್ಪೆಮನೆ) ಮತ್ತು ಮಾ.31 ಬುಧವಾರದಂದು ಭೂಮಿ ಗೀತಾ ಸಾಂಸ್ಕೃತಿಕ ವೇದಿಕೆ ಪಟ್ಲ ಇವರಿಂದ ಗೆಲಿಲಿಯೋ (ರಚನೆ: ಬರ್ಟೋಲ್ಟ್ ಬ್ರೆಖ್ಟ್, ಕನ್ನಡಕ್ಕೆ ಹೆಚ್.ಕೆ. ರಾಮಚಂದ್ರ ಮೂರ್ತಿ ಮತ್ತು ಜೆ.ಆರ್. ಲಕ್ಷಣರಾವ್, ನಿರ್ದೇಶನ: ಸಂತೋಷ್ ನಾಯಕ್ ಪಟ್ಲ) ನಾಟಕಗಳು ಪ್ರದರ್ಶನಗೊಳ್ಳಲಿವೆ ಎಂದು ಸಂಸ್ಥೆಯ ನಾಟಕ ವಿಭಾಗದ ಸಂಚಾಲಕರಾದ ಸಂತೋಷ್ ಶೆಟ್ಟಿ ಹಿರಿಯಡ್ಕ ಮತ್ತು ಸಂತೋಷ್ ನಾಯಕ್ ಪಟ್ಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.