ವಿದೇಶದಿಂದ ವಾಟ್ಸಪ್ ಸಂದೇಶ; ಸೈಬರ್ ಪೊಲೀಸರಿಗೆ ದೂರು
Update: 2021-03-24 20:13 IST
ಉಡುಪಿ, ಮಾ.24: ಉಡುಪಿಯ ಹಿರಿಯ ನಾಗರಿಕರಾದ, ನಿವೃತ್ತ ಸರಕಾರಿ ನೌಕರರ ಜಿಲ್ಲಾ ಸಂಘದ ಪ್ರಧಾನ ಕಾರ್ಯದರ್ಶಿಯಾಗಿರುವ ಶ್ರೀನಿವಾಸ ಶೆಟ್ಟಿ ತೋನ್ಸೆ ಅವರ ಮೊಬೈಲ್‌ನ ವಾಟ್ಸಪ್‌ಗೆ ಕಳೆದ ಮೂರು ದಿನ ಗಳಿಂದ ವಿದೇಶದಿಂದ ವಾಟ್ಸಪ್ ಸಂದೇಶ ಭಾವಚಿತ್ರಗಳೊಂದಿಗೆ ಬರುತ್ತಿರುವುದಾಗಿ ಕುಂದಾಪುರದ ಸೈಬರ್ ಪೊಲೀಸರಿಗೆ ದೂರು ನೀಡಿದ್ದಾರೆ.
ವಾಟ್ಸಪ್‌ನಲ್ಲಿ ಈ ನಂಬರ್‌ನ್ನು ನಿರ್ಬಂಧಿಸಿದರೂ, ಕೆಲಹೊತ್ತಿನ ಬಳಿಕ ಮತ್ತೊಂದು ನಂ.ನಿಂದ ಸಂದೇಶಗಳು ಬಂದಿವೆ. ಸಂದೇಶಗಳಲ್ಲಿ ಯಾವುದೇ ವಿಶೇಷಗಳಿಲ್ಲದಿದ್ದರೂ, ಅದರ ಉದ್ದೇಶ ಗೊತ್ತಾಗಿಲ್ಲ ಎಂದು ಎಸ್.ಎಸ್.ತೋನ್ಸೆ ಹೇಳಿದ್ದಾರೆ.
ಸಂದೇಶ ಕುಂದಾಪುರ ತಾಲೂಕು ಮಿತಿಯಲ್ಲಿದ್ದ ಕಾರಣ ಕುಂದಾಪುರ ಸೈಬರ್ ಪೊಲೀಸರಿಗೆ ಎಲ್ಲಾ ವಿವರಗಳೊಂದಿಗೆ ಕ್ರಮ ತೆಗೆದುಕೊಳ್ಳಲು ದೂರು ನೀಡಲಾಗಿದೆ ಎಂದವರು ಹೇಳಿದ್ದಾರೆ