ಉಡುಪಿ ಜಿಲ್ಲಾ ಐಟಾ ಅಧ್ಯಕ್ಷರಾಗಿ ಅಸ್ಲಂ ಹೈಕಾಡಿ ಆಯ್ಕೆ
Update: 2021-03-24 20:21 IST
ಉಡುಪಿ, ಮಾ.24: ಆಲ್ ಇಂಡಿಯಾ ಐಡಿಯಲ್ ಟೀಚರ್ಸ್ ಅಸೋಸಿ ಯೇಶನ್(ಐಟಾ) ಉಡುಪಿ ಜಿಲ್ಲಾ ಮಟ್ಟದ ಹೊಸ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ನೂತನ ಅಧ್ಯಕ್ಷರಾಗಿ ಹೂಡೆ ಸಾಲಿಹಾತ್ ಶಿಕ್ಷಣ ಸಂಸ್ಥೆ ಆಡಳಿತಾಧಿಕಾರಿ ಅಸ್ಲಂ ಹೈಕಾಡಿ ಆಯ್ಕೆಯಾದರು. ಮಹಿಳಾ ಸಂಚಾಲಕಿಯಾಗಿ ಶಿಕ್ಷಕಿ ಸುರಯ್ಯ ಶರೀಫ್ ಆಯ್ಕೆಯಾದರು. ಐಟಾ ರಾಜ್ಯ ಪ್ರಧಾನ ಕಾರ್ಯದರ್ಶಿ ಯಾಸೀನ್ ಹೊನ್ನಾವರ, ಐಟಾದ ಧ್ಯೇಯೋದ್ಧೇಶ ತಿಳಿಸಿದರು. ಐಟಾದ ರಾಜ್ಯಾಧ್ಯಕ್ಷ ರಝಾ ಮಾನ್ವಿ ಅಧ್ಯಕ್ಷತೆ ವಹಿಸಿದ್ದರು. ಜಮಾಅತೆ ಇಸ್ಲಾಮಿ ಹಿಂದ್‌ನ ಉಡುಪಿ ಜಿಲ್ಲಾ ಸಂಚಾಲಕ ಶಬ್ಬೀರ್ ಮಲ್ಪೆ ಉಪಸ್ಥಿತರಿದ್ದರು.
ಫ್ಲವರ್ಸ್ ಆಫ್ ಪ್ಯಾರಡೈಸ್‌ನ ಅರೇಬಿಕ್ ವಿಭಾಗದ ಮುಖ್ಯಸ್ಥ ಮೌಲಾನಾ ಇಮ್ರಾನುಲ್ಲಾ ಖಾನ್ ಕಿರಾಅತ್ ಪಠಿಸಿದರು. ನೂತನ ಜಿಲ್ಲಾ ಅಧ್ಯಕ್ಷ ಅಸ್ಲಂ ಹೈಕಾಡಿ ಸ್ವಾಗತಿಸಿದರು. ಶೋಯೆಬ್ ಮಲ್ಪೆ ಕಾರ್ಯಕ್ರಮ ನಿರ್ವಹಿಸಿದರು.