ಮ್ಯಾಪಥಾನ್ ಸ್ಪರ್ಧೆ: ರಾಷ್ಟ್ರಮಟ್ಟದ ಚಾಂಪಿಯನ್ ಪ್ರಶಸ್ತಿ
Update: 2021-03-24 20:23 IST
ಉಡುಪಿ, ಮಾ.24: ಇಸ್ರೋ-ಐಐಟಿ ಬಾಂಬೆ-ಏಐಸಿಟಿಇ ಜಂಟಿ ಸಹ ಭಾಗಿತ್ವದಲ್ಲಿ ಇತ್ತೀಚೆಗೆ ಏರ್ಪಡಿಸಲಾದ ಮ್ಯಾಪಥಾನ್ 2021 ಸ್ಪರ್ಧೆಯಲ್ಲಿ ಬಂಟಕಲ್ ಶ್ರೀಮಧ್ವ ವಾದಿರಾಜ ತಾಂತ್ರಿಕ ವಿದ್ಯಾಲಯದ ಡಾ.ನಾಗರಾಜ ಭಟ್ ಹಾಗೂ ಡಾ.ಸಚಿನ್ ಭಟ್ ರಾಷ್ಟ್ರಮಟ್ಟದ ಚಾಂಪಿಯನ್ ಆಗಿ ಹೊರ ಹೊಮ್ಮಿದ್ದಾರೆ.
ಇವರ ತಂಡದ ‘ಸಮುದ್ರ ಸೀಮಾ: ಕೋಸ್ಟಲ್ ಕರ್ನಾಟಕ ಶೋರ್‌ಲೈನ್ ಡೈನಮಿಕ್ಸ್’ ಎಂಬ ಸಂಶೋಧನೆಗೆ ಈ ಪುರಸ್ಕಾರ ದೊರೆತಿದೆ. ಡಾ.ನಾಗರಾಜ ಭಟ್ ವಿದ್ಯಾಲಯದ ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥರಾಗಿ ಹಾಗೂ ಡಾ.ಸಚಿನ್ ಭಟ್ ಎಲೆಕ್ಟ್ರಾನಿಕ್ಸ್ ವಿಭಾಗದ ಪ್ರಮುಖರಾಗಿ ಕಾರ್ಯನಿರ್ವ ಹಿಸುತ್ತಿದ್ದಾರೆ. ಆತ್ಮನಿರ್ಭರ ಭಾರತ ಯೋಜನೆಯಡಿಯಲ್ಲಿ ನಡೆಸಲ್ಪಟ್ಟ ಈ ಸ್ಪರ್ಧೆಯಲ್ಲಿ ದೇಶಾದ್ಯಂತ 10ಸಾವಿರಕ್ಕೂ ಹೆಚ್ಚಿನ ತಂಡಗಳು ಭಾಗವಹಿಸಿದ್ದವು.