ಪದವಿ ಪರೀಕ್ಷೆ: ಬ್ರಹ್ಮಾವರ ಕ್ರಾಸ್‌ಲ್ಯಾಂಡ್‌ಗೆ 2 ರ್ಯಾಂಕುಗಳು
Update: 2021-03-24 20:35 IST
ಬ್ರಹ್ಮಾವರ, ಮಾ.24: ಮಂಗಳೂರು ವಿವಿ 2019-20ನೇ ಸಾಲಿನಲ್ಲಿ ನಡೆಸಿದ ಪದವಿ ಪರೀಕ್ಷೆಗಳಲ್ಲಿ ಬ್ರಹ್ಮಾವರದ ಕ್ರಾಸ್‌ಲ್ಯಾಂಡ್ ಪದವಿ ಕಾಲೇಜಿನ ವಿದ್ಯಾರ್ಥಿಗಳು ಬಿ.ಎ. ವಿಭಾಗದಲ್ಲಿ ಎರಡು ರ್ಯಾಂಕ್‌ಗಳನ್ನು ಪಡೆದಿದ್ದಾರೆ ಎಂದು ಕಾಲೇಜಿನ ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾಲೇಜಿನ ಅಂತಿಮ ಬಿ.ಎ. ವಿದ್ಯಾರ್ಥಿನಿಯರಾದ ಸಲ್ವಾ ಮಹಮ್ಮದ್ ಖಾಸಿಮ್ ಅವರು 9ನೇ ರ್ಯಾಂಕ್ ಪಡೆದರೆ, ಅರ್ಚನಾ ಸೋಮನಾಥ ನಾಯಕಿ ಅವರು 10ನೇ ರ್ಯಾಂಕ್ ಗಳಿಸಿದ್ದಾರೆ. ಗ್ರಾಮೀಣ ಭಾಗದಲ್ಲಿ ರುವ ಕಾಲೇಜಿಗೆ ಕಳೆದ 36ವರ್ಷಗಳಲ್ಲಿ 39 ರ್ಯಾಂಕ್‌ಗಳು ಲಭಿಸಿವೆ ಎಂದು ಪ್ರಾಂಶುಪಾಲ ಪ್ರೊ.ಸ್ಯಾಮುವೆಲ್ ಕೆ.ಸ್ಯಾಮುವೆಲ್ ತಿಳಿಸಿದ್ದಾರೆ.
ಹಾರಾಡಿ ಗ್ರಾಮದ ಹೊನ್ನಾಳದವರಾದ ಸಲ್ವಾ ಮಹಮ್ಮದ್ ಖಾಸಿಂ ಸದ್ಯ ಮಣಿಪಾಲ ವಿವಿಯಲ್ಲಿ ಎಂಎಸ್‌ಡಬ್ಲು ಕಲಿಯುತಿದ್ದರೆ, ಚಾಂತಾರು ಗೋಳಿಕಟ್ಟೆಯ ಅರ್ಚನಾ ಉಡುಪಿಯ ವೈಕುಂಠ ಬಾಳಿಗಾ ಕಾನೂನು ಕಾಲೇಜಿ ನಲ್ಲಿ ಎಲ್‌ಎಲ್‌ಬಿ ಕಲಿಯುತಿದ್ದಾರೆ.