×
Ad

ಪೌಷ್ಟಿಕಾಂಶ ಆಹಾರ ಸೇವನೆಯಿಂದ ಆರೋಗ್ಯ ವೃದ್ಧಿ: ಕತ್ತಲ್‌ ಸಾರ್

Update: 2021-03-24 22:21 IST

ಮಂಗಳೂರು, ಮಾ.24: ವ್ಯಕ್ತಿ ಆರೋಗ್ಯವಂತನಾಗಬೇಕಾದರೆ ಪೌಷ್ಟಿಕಾಂಶಭರಿತ ಆಹಾರ ಸೇವನೆ ಮಾಡಬೇಕು ಎಂದು ತುಳು ಸಾಹಿತ್ಯ ಅಕಾಡಮಿ ಅಧ್ಯಕ್ಷ ದಯಾನಂದ್ ಕತ್ತಲ್‌ಸಾರ್ ಹೇಳಿದ್ದಾರೆ.

 ನಗರದ ತುಳು ಭವನದಲ್ಲಿ ನಡೆದ ಪೋಷಣ್ ಪಕ್ವಾಡ ಯೋಗಾಸನ ಶಿಬಿರ ಹಾಗೂ ಪೌಷ್ಠಿಕತೆ ಹೆಚ್ಚಿಸುವ ಆಯುಷ್ ಪುಡಿ, ಔಷಧ, ಬೀಜಗಳ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ದೈಹಿಕ ಆರೋಗ್ಯಕ್ಕೆ ಅಗತ್ಯವಿರುವ ಆಹಾರ ಸೇವಿಸುವುದರ ಜೊತೆಗೆ ಯೋಗಾಸನಗಳನ್ನು ಮಾಡುವ ಮೂಲಕ ಆರೋಗ್ಯದ ರಕ್ಷಣೆ ಮಾಡಬೇಕಾಗಿದೆ. ಯೋಗ ಶಿಬಿರಗಳನ್ನು ಆಯೋಜಿಸುವುದರಿಂದ ಜನರು ಆರೋಗ್ಯಕರ ಮತ್ತು ಉದ್ವೇಗ ಮುಕ್ತ ಸಮಾಜದತ್ತ ಸಾಗಲು ಸಹಾಯ ಮಾಡುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಆಯುಷ್ ಇಲಾಖೆಯ ವೈದ್ಯಾಧಿಕಾರಿಗಳಾದ ಸಹನಾ ಮತ್ತು ಶೋಭಾರಾಣಿ, ಪತಂಜಲಿ ಯೋಗ ಪೀಠ ಹರಿದ್ವಾರದ ಯೋಗ ಶಿಕ್ಷಕಿ ಸರಸ್ವತಿ ಪಿ., ಯೋಗ ಶಿಕ್ಷಕರಾದ ಸರೋಜಿನಿ, ಗೋವಿಂದ, ಮೀನಾಕ್ಷಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ನಿರೂಪಣಾಧಿಕಾರಿ ಶ್ಯಾಮಲಾ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News