×
Ad

ಮಾ.26ರಿಂದ 28: ಗಾರ್ಮೆಂಟ್ಸ್ ಬೃಹತ್ ಪ್ರದರ್ಶನ, ಮಾರಾಟ ಮೇಳ

Update: 2021-03-24 22:28 IST

ಮಂಗಳೂರು, ಮಾ.24: ಉಡುಪಿಯ ಕರಾವಳಿ ವೃತ್ತ ಸಮೀಪದ ಮಣಿಪಾಲ್ ಇನ್ ಹೊಟೇಲ್‌ನಲ್ಲಿ ಪ್ರಥಮ ಬಾರಿಗೆ ನೂರಕ್ಕೂ ಹೆಚ್ಚು ಪ್ರಸಿದ್ಧ ಕಂಪೆನಿಗಳ ಬ್ರಾಂಡೆಡ್ ಗಾರ್ಮೆಂಟ್ಸ್ ಮಾರಾಟ ಮೇಳವು ಮಾ.26ರಿಂದ 28ರವರೆಗೆ ನಡೆಯಲಿದೆ.

ಈಗಾಗಲೇ ಮಂಗಳೂರಿನ ಟಿಎಂಎ ಪೈ ಕನ್ವೆನ್ಶನ್ ಸೆಂಟರ್‌ನಲ್ಲಿ ಮೂರು ದಿನಗಳ ಮೇಳ ಆಯೋಜಿಸಿ ಯಶಸ್ವಿಯಾದ ಹಿನ್ನೆಲೆಯಲ್ಲಿ ಉಡುಪಿಯ ಮಣಿಪಾಲ್‌ನಲ್ಲಿ ಬೃಹತ್ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಹಮ್ಮಿಕೊಳಲಾಗಿದೆ.

ಎಲ್ಲ ವರ್ಗದವರು ಕೂಡ ಶಾಪಿಂಗ್ ಮಾಡುವಂತಿರಬೇಕು ಎಂಬ ಉದ್ದೇಶದಿಂದ ಬೆಳಗ್ಗೆ 10ರಿಂದ ರಾತ್ರಿ 9ರವರೆಗೆ ಮೇಳ ನಡೆಯಲಿದೆ. ಈ ನಡುವೆ ವಾರಾಂತ್ಯ ವೇಳ ಹೆಚ್ಚು ಸಾರ್ವಜನಿಕರು ಬರುವ ನಿರೀಕ್ಷೆ ಇದೆ. ಈ ಹಿನ್ನೆಲೆಯಲ್ಲಿ ಎಲ್ಲ ರೀತಿಯ ಸಿದ್ಧತೆ ಹಾಗೂ ಹೆಚ್ಚುವರಿ ಸ್ಟಾಕ್‌ಗಳನ್ನು ಸಂಗ್ರಹಿಸಲಾಗಿದೆ.

ಕೋವಿಡ್-19ರಿಂದಾಗಿ ಮಾರುಕಟ್ಟೆಯಲ್ಲಿನ ಏರುಪೇರುಗಳನ್ನು ಸರಿದೂಗಿಸಲು ಈ ಮೇಳ ಆಯೋಜಿಸಲಾ ಗಿದೆ. ಕೋವಿಡ್ ಸಂದರ್ಭದಲ್ಲಿ ಕಾರ್ಮಿಕರಿಗೆ ತೊಂದರೆಯಾಗಬಾರದು ಎಂಬ ದೃಷ್ಟಿಯಿಂದ ಉತ್ಪಾದನೆ ಸ್ಥಗಿತಗೊಳಿಸಲಿಲ್ಲ. ಉತ್ಪಾದನೆಯಾದಷ್ಟು ಪ್ರಮಾಣದಲ್ಲಿ ಮಾರಾಟವಾಗದ ಹಿನ್ನೆಲೆಯಲ್ಲಿ ಹೆಚ್ಚು ಸಂಗ್ರಹ ಉಳಿದಿದೆ. ಈ ಸಂಗ್ರಹವನ್ನು ವಿಲೇವಾರಿ ಮಾಡುವ ಉದ್ದೇಶದಿಂದ ಉತ್ಪಾದನಾ ವೆಚ್ಚಕ್ಕಿಂತಲೂ ಕಡಿಮೆ ದರದಲ್ಲಿ (ಶೇ.80ರವರೆಗೆ ರಿಯಾಯಿತಿ) ಮಾರಾಟ ಮಾಡಲಾಗುತ್ತಿದೆ.

ಕೋವಿಡ್ ಕಾರಣದಿಂದ ದೇಶಾದ್ಯಂತ ಲಾಕ್‌ಡೌನ್ ಇದ್ದುದರಿಂದ ಕೋಟ್ಯಂತರ ರೂ. ಬೆಲೆ ಬಾಳುವ ಗಾರ್ಮೆಂಟ್ಸ್‌ಗಳು ಗೋಡೌನ್‌ನಲ್ಲಿ ಬಾಕಿಯಾಗಿತ್ತು. ಇದನ್ನು ಕಂಪೆನಿಗಳು ಗ್ರಾಹಕರಿಗೆ ರಿಯಾಯಿತಿ ದರದಲ್ಲಿ ನೀಡಲು ಈ ಮೇಳ ಆಯೋಜಿಸಲಾಗಿದೆ.

ರಿಟೇಲ್‌ನಲ್ಲಿ 4 ಸಾವಿರ ರೂ. ಇರುವ ಗಾರ್ಮೆಂಟ್ಸ್‌ಗಳು ಈ ಮೇಳದಲ್ಲಿ ಕೇವಲ 350ರಿಂದ 550 ರೂ. ಒಳಗಡೆ ಖರೀದಿಗೆ ಲಭ್ಯವಿದೆ. ಬ್ರಾಂಡೆಡ್ ಫಾರ್ಮಲ್ ಶರ್ಟ್ ಕೇವಲ 650ರಿಂದ 1 ಸಾವಿರ ರೂ. ಒಳಗಡೆ ಲಭ್ಯ.

ಮೊಟೆ ಕಾರ್ಲೊ, ಬ್ಲಾಕ್‌ಬೆರ್ರಿ, ಕಿಲ್ಲರ್, ಇಂಡಿಗೋ ನೇಷನ್ ಸೇರಿದಂತೆ ದೇಶ, ವಿದೇಶದ ಕಂಪೆನಿಗಳ ಉತ್ಪನ್ನ ಗಳು ಈ ಮೇಳದಲ್ಲಿ ಇರಲಿವೆ. ರಿಯಾಯಿತಿ ದರದಲ್ಲಿ ಖರೀದಿಗೆ ಗ್ರಾಹಕರಿಗೆ ಇದೊಂದು ಸುವರ್ಣಾವಕಾಶ ವಾಗಿದೆ. ಗ್ರಾಹಕರು ಖರೀದಿಗೆ ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಸೇರಿದಂತೆ ಎಲ್ಲ ಡಿಜಿಟಲ್ ಪಾವತಿ ಸೌಲಭ್ಯವನ್ನು ಬಳಸಿಕೊಳ್ಳಬಹುದು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News