ಪತಿಯನ್ನು ಬಂಧಿಸಿ ಯುವತಿ ಜತೆ ಮದುವೆ ಪ್ರಕರಣ: ವ್ಯಕ್ತಿಯ ವಿಚಾರಣೆ
Update: 2021-03-24 22:29 IST
ಮಂಗಳೂರು, ಮಾ.24: ಪತಿಯನ್ನು ಬಂಧಿಸಿ ಯುವತಿಯ ಜತೆ ಮದುವೆ ಮಾಡಿಸಲಾಗಿದೆ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿ ವ್ಯಕ್ತಿಯನ್ನು ಪಾಂಡೇಶ್ವರ ಪೊಲೀಸರು ವಿಚಾರಣೆ ನಡೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಯುವತಿಯನ್ನು ಮದುವೆ ಮಾಡಿಕೊಂಡ ಉದ್ಯಮಿ ಗಂಗಾಧರ್ ಈಗಾಗಲೇ ನಾಲ್ಕು ಮದುವೆಯಾಗಿದ್ದಾರೆ ಎಂದು ತಿಳಿದು ಬಂದಿದೆ. ಗಂಗಾಧರ್ ಅವರನ್ನು ಅಪಹರಿಸಿ ಬಲವಂತವಾಗಿ ಯುವತಿ ಜತೆ ಮದುವೆ ಮಾಡಿಸಲಾಗಿದೆ ಎಂದು ಅವರ ಪತ್ನಿ ಪೊಲೀಸರಿಗೆ ದೂರು ನೀಡಿದ್ದರು. ಅದರಂತೆ ಪೊಲೀಸರು ವ್ಯಕ್ತಿಯನ್ನು ವಶದಲ್ಲಿರಿಸಿ ವಿಚಾರಣೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಆದರೆ ವ್ಯಕ್ತಿಯನ್ನು ವಶಕ್ಕೆ ಪಡೆದಿರುವ ಬಗ್ಗೆ ಪೊಲೀಸರು ಖಚಿತಪಡಿಸಿಲ್ಲ.