×
Ad

ಮೇ 1ರಿಂದ ಟಾರ್ಪೆಡೊಸ್ ಕ್ರೀಡಾ ಹಬ್ಬ

Update: 2021-03-24 22:59 IST

ಮಂಗಳೂರು, ಮಾ. 24: ಟಾರ್ಪೆಡೊಸ್ ಸ್ಪೋಟ್ಸ್ ಕ್ಲಬ್ ವತಿಯಿಂದ ಮಾ. 1ರಿಂದ 10ರವರೆಗೆ ಟಾರ್ಪೆಡೊಸ್ ಕ್ರೀಡಾ ಹಬ್ಬವನ್ನು ಆಯೋಜಿಸಲಾಗಿದೆ ಎಂದು ಕ್ಲಬ್‌ನ ಅಧ್ಯಕ್ಷ ಗೌತಮ್ ಶೆಟ್ಟಿ ತಿಳಿಸಿದ್ದಾರೆ.

ಕ್ರೀಡಾ ಹಬ್ಬದಲ್ಲಿ ಕ್ರಿಕೆಟ್ (ಟೆನಿಸ್ ಮತ್ತು ಲೆದರ್ ಬಾಲ್), 40 ವರ್ಷಕ್ಕೂ ಮೇಲ್ಪಟ್ಟವರಿಗಾಗಿ ಪ್ರತ್ಯೇಕ ಟೆನಿಸ್ ಬಾಲ್ ಕ್ರಿಕೆಟ್, ಕುತೂಹಲಕಾರಿ ಬಾಕ್ಸ್ ಕ್ರಿಕೆಟ್, ಫಿಡೆ ರೇಟಿಂಗ್ ಚೆಸ್, ಬ್ಯಾಡ್ಮಿಂಟನ್, ಟೇಬಲ್ ಟೆನಿಸ್ ಮತ್ತು ಮಿನಿ ಫುಟ್ಬಾಲ್ ಕ್ರೀಡೆಗಳನ್ನು ಮಂಗಳೂರು, ಸುರತ್ಕಲ್, ಹಳೆಯಂಗಡಿ, ಕುಂದಾಪುರ ಮತ್ತು ಕೊರಾವಡಿಯಲ್ಲಿ ನಡೆಸಲು ತೀರ್ಮಾನಿಸಲಾಗಿದೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಟಾರ್ಪೆಡೊಸ್‌ನಿಂದ ಹೊಸ ಮಾದರಿ

ಕ್ರಿಕೆಟ್‌ನಲ್ಲಿ ಇತ್ತೀಚಿನ ದಿನಗಳಲ್ಲಿ ಮಾಯವಾಗುತ್ತಿರುವ ಸಿಂಗಲ್, ಡಬಲ್ ಮತ್ತು ಪ್ಲೇಸ್ಮೆಂಟ್ ಮಾದರಿಯಲ್ಲಿ ಕ್ರಿಕೆಟ್ ಪಂದ್ಯಾಟ ನಡೆಯಲಿದೆ. ನೋಂದಾಯಿಸಲ್ಪಟ್ಟ ಆಟಗಾರರನ್ನು ತಂಡಗಳನ್ನಾಗಿ ಮಾಡಲು ಸಂಘಟರು ಸಮಿತಿಗಳನ್ನು ರಚಿಸಿದಾದರೆ. ದಾಖಲೆ ಆಧರಿಸಿ ಉತ್ತಮ ಶ್ರೇಣಿಯಲ್ಲಿರುವ ಆಟಗಾರರನ್ನು ತಂಡದ ನಾಯಕ ರನ್ನಾಗಿ ನೇಮಿಸಲಾಗುವುದು. ತಂಡಗಳನ್ನು ಆಯ್ದ ಪ್ರಾಯೋಜಕರು ಆಯ್ಕೆ ಮಾಡುವರು. ತಂಡಗಳ ಆಯ್ಕೆಯಲ್ಲಿ ಹಿರಿಯ ಕ್ರಿಕೆಟಿಗರಿಗೆ ಮತ್ತು 90ರ ದಶಕದ ಮಾಲಕರಿಗೆ ಆದ್ಯತೆ ನೀಡಲಾಗುವುದು. ತಂಡವು 15 ಆಟಗಾರರನ್ನು ಹೊಂದಲಿದೆ. ಪಂದ್ಯ 10 ಓವರ್‌ಗಳಾಗಿದ್ದು, ಬಿಳಿಯ ಲೆದರ್ ಬಾಲ್/ಟೆನಿಸ್‌ಬಾಲ್ ಬಳಸಲಾಗುತ್ತದೆ. ಆರಂಭಿಕ ಬ್ಯಾಟ್ಸ್‌ಮನ್ 2 ಓವರುಗಳನ್ನು ಆಡಿ ಹಿಂದಿರುಗಬೇಕು. ಔಟ್ ಆದರೂ ಅವರು 2 ಓವರ್ ಪೂರ್ಣಗೊಳಿಸಬೇಕು. ಪ್ರತಿ ಬಾರಿ ಔಟ್ ಆದಾಗಲೂ ಒಟ್ಟು ಸ್ಕೋರ್‌ನಿಂದ ದಂಡದ ರೂಪದಲ್ಲಿ ರನ್ ಕಳೆಯಲಾಗುವುದು. ಅಂತಿಮ ಸ್ಕೋರ್‌ಗೆ ಸಮನವಾಗಿ ಒಟ್ಟು ಗಳಿಸಿದ ರನ್/ ಒಟ್ಟು ಕಳೆದುಕೊಂಡ ವಿಕೆಟ್. 3 ಮತ್ತು 4ನೆ ಓವರ್ ಆಡಲು ಆ ಕ್ರಮಾಂಕದ ಆಟಗಾರರು ಜತೆಯಾಗುತ್ತಾರೆ. ಪ್ರತಿ 2 ಓವರ್‌ಗಳಿಗೊಮ್ಮೆ ಇಬ್ಬರು ಹೊಸ ಆಟಗಾರರು ಆಡುತ್ತಾರೆ. 9 ಓವರ್‌ಗಳು ಮುಗಿದ ತಕ್ಷಣ ಒಬ್ಬ ಬ್ಯಾಟ್ಸ್‌ಮನ್ 11ನೆ ಆಟಗಾರರಿಗೆ ಬ್ಯಾಟಿಂಗ್ ಮಾಡಲು ಅವಕಾಶ ಮಾಡಿಕೊಡಬೇಕು. ಪ್ರತಿಯೊಬ್ಬರೂ ತಲಾ 1 ಓವರ್‌ನಂತೆ 10 ಬೌಲರ್‌ಗಳು ಬೌಲಿಂಗ್ ಮಾಡಬೇಕು. ಒಂದು ಇನ್ನಿಂಗ್ಸ್ ಮುಗಿದ ತಕ್ಷಣ ತಂಡದ 15 ಮಂದಿ ಆಟಗಾರರಲ್ಲಿ 4 ಆಟಾಗರನ್ನು ಬದಲಾಯಿಸಬಹುದು. ಇನ್ನಿಂಗಸ್ ಕೊನೆ ತನಕವೂ 30 ಗಜಗಳ ಸರ್ಕಲ್‌ನಲ್ಲಿ ಕೇವಲ 4 ಫೀಲ್ಡರ್‌ಗಳಿಗೆ ಅವಕಾಸ. ಈ ನಿಯಮ ಟೆನಿಸ್, ಲೆದರ್ ಬಾಲ್ ಕ್ರಿಕೆಟ್ ಮತ್ತು 40 ಮತ್ತು ಅದಕ್ಕಿಂತ ಮೇಲ್ಪಟ್ಟವರ ವಿಭಾಗದಲ್ಲಿ ಪಾಲ್ಗೊಳ್ಳುವವರಿಗೆ ಅನ್ವಯಿಸುತ್ತದೆ ಎಂದು ಗೌತಮ್ ಶೆಟ್ಟಿ ವಿವರ ನೀಡಿದರು.

ಪ್ರತಿಯೊಂದು ರನ್, ವಿಕೆಟ್‌ಗೂ ನಗದು!

ಬ್ಯಾಟ್ಸ್‌ಮನ್ ಗಳಿಸುವ ಪ್ರತಿಯೊಂದು ರನ್ ಹಾಗೂ ಬೌಲರ್ ಗಳಿಸುವ ಪ್ರತಿಯೊಂದು ವಿಕೆಟ್‌ಗೂ ನಗದು ಬಹುಮಾನವಿರುತ್ತದೆ. ಜತೆಗೆ ಪಂದ್ಯಶ್ರೇಷ್ಠ, ಉತ್ತಮ ಬೌಲರ್, ಉತ್ತಮ ಬ್ಯಾಟ್ಸ್‌ಮನ್‌ಗೂ ನಗದು ಬಹುಮಾನದ ಜತೆಗೆ ಚಾಂಪಿಯನ್ ತಂಡಕ್ಕೆ 5 ಲಕ್ಷ ರೂ. ನಗದು ಮತ್ತು ರನ್ನರ್ ಅಪ್ ತಂಡಕ್ಕೆ 3 ಲಕ್ಷ ರೂ. ಬಹುಮಾನ ದೊರೆಯಲಿದೆ ಎಂದು ಗೌತಮ್ ಶೆಟ್ಟಿ ತಿಳಿಸಿದರು.

ಕ್ರೀಡಾ ಹಬ್ಬದಲ್ಲಿ 40 ವರ್ಷ ಮತ್ತು ಅದಕ್ಕೂ ಮೇಲ್ಪಟ್ಟವರಿಗೆ ಟಾರ್ಪೆಡೊಸ್ ಲೆಜೆಂಡ್ಸ್ ಕಪ್ ಆಯೋಜಿಸಲಾಗಿದೆ. ಮೇಲೆ ಸೂಚಿಸಲಾದ ಎಲ್ಲಾ ನಿಯಮಗಳು ಈ ಟೂರ್ನಿಗೂ ಅನ್ವಯಿಸಲಿದ್ದು, ವಿಜೇತ ತಂಡಕ್ಕೆ 2 ಲಕ್ಷ ರೂ. ಹಾಗೂ ರನ್ನರ್ ಅಪ್ ತಂಡಕ್ಕೆ 1 ಲಕ್ಷ ರೂ. ಬಹುಮಾನವಿರಲಿದೆ.

ಬ್ಯಾಡ್ಮಿಂಟನ್, ಟೇಬಲ್ ಸ್ಪರ್ಧೆಗಳು ಲೀಗ್ ಹಾಗೂ ನಾಕೌಟ್ ಮಾದರಿಯಲ್ಲಿ ನಡೆಯಲಿದೆ. ಪಂದ್ಯ ಹಳೆಯಂಗಡಿಯಲ್ಲಿರುವ ಟಾರ್ಪೆಡೊಸ್ ಕ್ಲಬ್‌ನಲ್ಲಿ ನಡೆಯಲಿದೆ ಆಟಗಾರ ಗಳಿಸುವ ಪ್ರತಿಯೊಂದು ಅಂಕಕ್ಕೂ ನಗದು ಬಹುಮಾನ, ಚಾಂಪಿಯನ್ ಚಂಡ 2 ಲಕ್ಷ ರೂ. ನಗದು ಹಾಗೂ ರನ್ನರ್ ಅಪ್ ತಂಡ 1 ಲಕ್ಷ ರೂ. ಬಹುಮಾನ ಪಡೆಯಲಿದೆ.

ಕೋಟೇಶ್ವರದ ಯುವ ಮೆರಿಡಿಯನ್ ಹುಲ್ಲುಹಾಸಿನಲ್ಲಿ ಫುಟಬಾಲ್ ಪಂದ್ಯ ನಡೆಯಲಿದೆ. ಚಾಂಪಿಯನ್‌ಶಿಪ್‌ನಲ್ಲಿ ಗೋಲು ಗಳಿಸುವ ಪ್ರತಿಯೊಬ್ಬ ಆಟಗಾರನಿಗೂ ಆಕರ್ಷಕ ಬಹುಮಾನ ನೀಡಲಾಗುವುದು. ಚಾಂಪಿಯನ್ಸ್ ತಂಡವು 2 ಲಕ್ಷ ರೂ. ಹಾಗೂ ರನ್ನರ್ ಅಪ್ ತಂಡ 1 ಲಕ್ಷ ರೂ. ಬಹುಮಾನ ಪಡೆಯಲಿದೆ.

ಫಿಡೆ ರೇಟೆಡ್ ಚೆಸ್ ಟೂರ್ನಿ ಕುಂದಾಪುರದ ಕೊರಾವಡಿಯ ಕಡಲ ಕಿನಾರೆಯಲ್ಲಿ ನಡೆಯಲಿದೆ. ಇದು ಮೊದಲ ಟಾರ್ಪಡೊಸ್ ಟ್ರೋಫಿ ಅಖಿಲ ಭಾರತ ಫಿಡೆ ರೇಟಿಂಗ್ ರಾಪಿಡ್ ಚೆಸ್ ಟೂರ್ನಿಯಾಗಿದೆ. ಬಾಕ್ಸ್ ಕ್ರಿಕೆಟ್‌ನಲ್ಲಿ ಭಾಗವಹಿಸುವವರು ವೈಯಕ್ತಿಕವಾಗಿ ಭಾಗವಹಿಸಬಹುದು ಎಂದು ಗೌತಮ್ ಶೆಟ್ಟಿ ತಿಳಿಸಿದರು.

ಗೋಷ್ಠಿಯಲ್ಲಿ ಪೋಷಕರಾದ ಪ್ರತಿಭಾ ಕುಳಾಯಿ, ಗಣೇಶ್ ಕಾಮತ್, ಅಶ್ವಿನ್ ಕುಮಾರ್ ಪಡುಕೋಣೆ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News