×
Ad

ಭಟ್ಕಳದ ಪ್ರಮುಖ ನಾಲ್ಕು ಉನ್ನತ ಹುದ್ದೆಗಳಲ್ಲಿ ಮಹಿಳೆಯರು

Update: 2021-03-24 23:04 IST

ಭಟ್ಕಳ : ಭಟ್ಕಳದಲ್ಲೀಗ ಮಹಿಳಾ ಅಧಿಕಾರಿಗಳೇ ಪಾರುಮಾತ್ಯ ಹೊಂದಿದ್ದು ಪ್ರಮುಖ ಹಾಗೂ ಉನ್ನತ ನಾಲ್ಕು ಹುದ್ದೆಗಳನ್ನು ಅಲಂಕರಿಸಿರುವ ಮಹಿಳಾಮಣಿಗಳು ಭಟ್ಕಳವನ್ನು ಅಭಿವೃದ್ಧಿಪಥದತ್ತ ಕೊಂಡೊಯ್ಯವಲ್ಲಿ ತಮ್ಮ ಪಾತ್ರವಹಿಸುತ್ತಿದ್ದಾರೆ.

ಐಎಎಸ್ ಶ್ರೇಣಿಯ ಭಟ್ಕಳ ಉಪವಿಭಾಗಾಧಿಕಾರಿಯಾಗಿದ್ದ ಭರತ್ ಎಸ್. ರವರ ವರ್ಗಾವಣೆಯಿಂದಾಗಿ ತೆರವಾಗಿದ್ದ ಇಲ್ಲಿನ ಸಹಾಯಕ ಆಯುಕ್ತರ ಹುದ್ದೆಗೆ ಕೆ.ಎ.ಎಸ್ ಶ್ರೇಣಿಯ ಮಮತಾ ದೇವಿ ನೇಮಿಸಿ ಸರ್ಕಾರ ಆದೇಶ ಹೊರಡಿಸಿದ್ದು ಅವರು ಸೋಮವಾರ ತಮ್ಮ ಹುದ್ದೆಯನ್ನು ಅಲಂಕರಿಸಿಕೊಂಡಿದ್ದಾರೆ.

ಹಾಗೆ ಇತ್ತಿಚೆಗೆ ವರ್ಗಾವಣೆಯಾಗಿದ್ದ ಭಟ್ಕಳ ನಗರ ಪೊಲೀಸ್ ಠಾಣೆಯ ಪಿ.ಎಸ್.ಐ ಭರತ್ ರವರ ಸ್ಥಾನಕ್ಕೆ ಉಡುಪಿ ಜಿಲ್ಲೆಯ ಹೆಬ್ರಿಯಿಂದ ವರ್ಗಾವಣೆಯಾಗಿ ಬಂದಿರುವ ಸುಮಾ ಆಚಾರ್ಯ ಭಟ್ಕಳ ನಗರಠಾಣೆಯ ಪಿ.ಎಸ್.ಐ ಆಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಹಾಗೆಯೆ ಇಲ್ಲಿನ ವಲಯ ಅರಣ್ಯಾಧಿಕಾರಿಯಾಗಿ ಸವಿತಾ ದೇವಾಡಿಗ ಕಳೆದ ಒಂದೆರಡು ವರ್ಷದಿಂದ ಕಾರ್ಯನಿರ್ವಹಿಸುತ್ತಿದ್ದಾರೆ.

ಇಲ್ಲಿನ ಸರ್ಕಾರಿ ಆಸ್ಪತ್ರೆಯನ್ನು ಜನರ ಆಸ್ಪತ್ರೆಯನ್ನಾಗಿ ಮಾಡುವಲ್ಲಿ ನಿರಂತರ ಶ್ರಮಿಸುತ್ತಿರುವ  ಭಟ್ಕಳ ಸರ್ಕರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಭಟ್ಕಳದವರೇ ಆಗಿರುವ ಸವಿತಾ ಕಾಮತ್ ಕಾರ್ಯ ನಿರ್ವಹಿಸುತ್ತಿದ್ದು ಭಟ್ಕಳದ ಸರ್ಕಾರಿ ಆಸ್ಪತ್ರೆಯನ್ನು ಸಾರ್ವಜನಿಕರ ಸಹಭಾಗಿತ್ವದೊಂದಿಗೆ ಹೈಟೆಕ್ ಆಸ್ಪತ್ರೆಯನ್ನಾಗಿ ರೂಪಿಸಿದ ಕೀತಿಯನ್ನು ಪಡೆದುಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News