ಸ್ಟಟ್‌ಗಾರ್ಟ್ ಟೂರ್ನಿಯಿಂದ ಒಸಾಕಾ ಹೊರಕ್ಕೆ
Update: 2021-03-25 10:21 IST
ಬರ್ಲಿನ್: ಮುಂದಿನ ತಿಂಗಳು ಸ್ಟಟ್‌ಗಾರ್ಟ್ ನಲ್ಲಿ ನಡೆಯಲಿರುವ ಡಬ್ಲುಟಿಎ ಕ್ಲೇ-ಕೋರ್ಟ್ ಪಂದ್ಯಾವಳಿಯಿಂದ ವಿಶ್ವದ ಎರಡನೇ ಶ್ರೇಯಾಂಕಿತೆ ಜಪಾನ್‌ನ ನವೋಮಿ ಒಸಾಕಾ ಹಿಂದೆ ಸರಿದಿದ್ದಾರೆ ಎಂದು ಸಂಘಟಕರು ಬುಧವಾರ ದೃಢಪಡಿಸಿದ್ದಾರೆ.
ಕಳೆದ ತಿಂಗಳು ಆಸ್ಟ್ರೇಲಿಯನ್ ಓಪನ್ ಫೈನಲ್‌ನಲ್ಲಿ ಅಮೆರಿಕದ ಜೆನ್ನಿಫರ್ ಬ್ರಾಡಿ ಅವರನ್ನು ಸೋಲಿಸಿದ ಒಸಾಕಾ 2021ರ ಮೊದಲ ಗ್ರಾನ್ ಸ್ಲಾಮ್ ಪ್ರಶಸ್ತಿಯನ್ನು ಜಯಿಸಿದ್ದರು.