ಮಾ. 26 : ಯುನಿವೆಫ್ ನಿಂದ 'ಯುವಕರ ಸಮಾಗಮ' ಕಾರ್ಯಕ್ರಮ
Update: 2021-03-25 11:54 IST
ಮಂಗಳೂರು : ಯುನಿವೆಫ್ ಕರ್ನಾಟಕ ಮಂಗಳೂರು ಶಾಖೆ ವತಿಯಿಂದ ಮಾ.26ರ ಸಂಜೆ 7 ಗಂಟೆಗೆ ಕಂಕನಾಡಿ ಬಾಲಿಕಾಶ್ರಮ ರಸ್ತೆಯಲ್ಲಿರುವ ಜಮೀಯತುಲ್ ಫಲಾಹ್ ಹಾಲ್ ನಲ್ಲಿ "ಯುವಕರ ಸಮಾಗಮ" ಕಾರ್ಯಕ್ರಮ ನಡೆಯಲಿದೆ.
ಈ ಕಾರ್ಯಕ್ರಮದಲ್ಲಿ "ಮುಸ್ಲಿಂ ಸಮುದಾಯ-ಭೂತ, ವರ್ತಮಾನ ಮತ್ತು ಭವಿಷ್ಯ" ಎಂಬ ವಿಷಯದಲ್ಲಿ ಯುನಿವೆಫ್ ಅಧ್ಯಕ್ಷ ರಫೀಉದ್ದೀನ್ ಕುದ್ರೋಳಿಯವರಿಂದ ಯುವ ಜಾಗೃತಿ ಕಾರ್ಯಕ್ರಮ ನಡೆಯಲಿದೆ. ಹೆಚ್ಚಿನ ವಿವರಗಳಿಗೆ ಮೊ. 9845199931ನ್ನು
ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.