ಎರಡನೇ ದಿನ ಕೊಂಚ ಇಳಿಕೆ ಕಂಡ ತೈಲದರ: ಪೆಟ್ರೋಲ್‌ 21 ಪೈಸೆ, ಡೀಸೆಲ್‌ 20 ಪೈಸೆ ಕಡಿತ

Update: 2021-03-25 06:53 GMT

ಹೊಸದಿಲ್ಲಿ: ಜಾಗತಿಕ ಕಚ್ಚಾ ತೈಲ ಬೆಲೆಯು ತೀವ್ರವಾಗಿ ಕುಸಿಯುತ್ತಿರುವ ಕಾರಣ ತೈಲ ಮಾರುಕಟ್ಟೆ ಕಂಪೆನಿಗಳು ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆಯಲ್ಲಿ ಕೊಂಚ ಇಳಿಕೆಯನ್ನು ಮಾಡಿವೆ. 2021ರಲ್ಲಿ ಮೊದಲ ಬಾರಿಗೆ ಬುಧವಾರದಂದು ತೈಲ ಬೆಲೆಯಲ್ಲಿ ಕೊಂಚ ಇಳಿಕೆಯಾಗಿತ್ತು. ಇದೀಗ ಸತತ ಎರಡನೇ ದಿನವೂ ಇಳಿಕೆ ಕಂಡಿದೆ.

ಪೆಟ್ರೋಲ್ ದರವನ್ನು 21 ಪೈಸೆ ಕಡಿತಗೊಳಿಸಲಾಗಿದ್ದರೆ, ಡೀಸೆಲ್ ಬೆಲೆಯನ್ನು 20 ಪೈಸೆ ಇಳಿಸಲಾಗಿದೆ.

ಕಡಿತದ ನಂತರ, ದೆಹಲಿಯಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ 90.78 ರೂ., ಕೋಲ್ಕತಾ (ರೂ. 90.98), ಮುಂಬೈ (ರೂ. 97.19), ಚೆನ್ನೈ (ರೂ. 92.77), ಬೆಂಗಳೂರು (93.28 ರೂ.), ಹೈದರಾಬಾದ್ (94.39 ರೂ) ಮತ್ತು ಜೈಪುರ (97.31 ರೂ) ನಗರಗಳಲ್ಲೂ ಬೆಲೆಗಳು ಇಳಿದಿವೆ.

ಈ ನಡುವೆ, ದೆಹಲಿಯಲ್ಲಿ ಒಂದು ಲೀಟರ್ ಡೀಸೆಲ್ 20 ಪೈಸೆ ಇಳಿಕೆಯಾಗಿ 81.10 ರೂ., ಮುಂಬೈ (ರೂ. 88.20), ಚೆನ್ನೈ (ರೂ. 86.10), ಕೋಲ್ಕತ್ತಾ (ರೂ. 83.98), ಬೆಂಗಳೂರು (ರೂ. 85.99) ಮತ್ತು ಹೈದರಾಬಾದ್ (ರೂ. 88.45) ಸೇರಿದಂತೆ ಇತರ ನಗರಗಳಲ್ಲಿಯೂ ತೈಲ ದರ ಕುಸಿದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News