×
Ad

ಸೇನಾ ವಾಹನಕ್ಕೆ ಬೆಂಕಿ ತಗಲಿ ಮೂವರು ಯೋಧರು ಜೀವಂತ ದಹನ

Update: 2021-03-25 12:33 IST
ಸಾಂದರ್ಭಿಕ ಚಿತ್ರ

ಜೈಪುರ: ಸೇನಾ ವಾಹನವೊಂದು ಉರುಳಿಬಿದ್ದು ಬೆಂಕಿ ಹತ್ತಿಕೊಂಡ ಪರಿಣಾಮ ಮೂವರು ಯೋಧರು ಜೀವಂತ ದಹನವಾದರೆ, ಇತರ ಐವರು ಗಾಯಗೊಂಡಿರುವ  ಆಘಾತಕಾರಿ ಘಟನೆ ರಾಜಸ್ಥಾನದ ಗಂಗಾನಗರ ಜಿಲ್ಲೆಯಲ್ಲಿ ಗುರುವಾರ ಬೆಳಗ್ಗೆ ನಡೆದಿದೆ.

ಸೂರತ್ ಗಢ-ಚತರ್ ಘಡ ರೋಡ್ ನ 330 ಆರ್ ಡಿ ಇಂದಿರಾ ಗಾಂಧಿ ಕಾಲುವೆಯ ಬಳಿ ಗುರುವಾರ ಬೆಳಗ್ಗೆ 2:30ರ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಚಾಲಕನ ಜಿಪ್ಸಿ ಕಾರಿನ ನಿಯಂತ್ರಣ ಕಳೆದುಕೊಂಡ ಪರಿಣಾಮ ವಾಹನವು ಉರುಳಿ ಬಿದ್ದು ಬೆಂಕಿ ಹೊತ್ತಿಕೊಂಡಿದೆ.

ಘಟನೆಯ ಬಳಿಕ ಮೂವರು ಯೋಧರು ಜೀವಂತ ದಹನವಾದರು ಎಂದು ಮೂಲಗಳು ತಿಳಿಸಿವೆ.

ಮೃತಪಟ್ಟವರಲ್ಲಿ ಸುಬೇದಾರ್ ಕೂಡ ಸೇರಿದ್ದು, ಅವರ ಹೆಸರು ಇನ್ನಷ್ಟು ಖಚಿತವಾಗಬೇಕಾಗಿದೆ.ಇತರರನ್ನು ಹೆಡ್ ಕಾನ್ ಸ್ಟೇಬಲ್ ದೇವ್ ಕುಮಾರ್ ಹಾಗೂ ಹವಾಲ್ದಾರ್ ಎಸ್ ಕೆ ಶುಕ್ಲಾ ಎಂದು ಗುರುತಿಸಲಾಗಿದೆ.

ಗಾಯಾಳು ಯೋಧರನ್ನು ಅಂಕಿತ್ ವಾಜಪೇಯಿ, ಉಮೇಶ್ ಯಾದವ್,ಆಶೀಷ್ ಕುಮಾರ್ ಓಜಾ ಹಾಗೂ ಬಬ್ಲೂ ಎಂದು ಗುರುತಿಸಲಾಗಿದೆ. ಎಲ್ಲರೂ ಬಥಿಂಡಾದ 47 ಸಶಸ್ತ್ರ ಘಟಕಕ್ಕೆ ಸೇರಿದವರಾಗಿದ್ದರು.

ಘಟನೆಯ ಬಳಿಕ ರಾಜಿಯಾಸರ್ ಪೊಲೀಸರು ಘಟನಾಸ್ಥಳಕ್ಕೆ ತಲುಪಿದ್ದು, ಗಾಯಗೊಂಡಿರುವ ಐವರು ಯೋಧರನ್ನು ಸೂರತ್ ಗಢ ಆಸ್ಪತ್ರೆಯ ತುರ್ತು ವಿಭಾಗಕ್ಕೆ ದಾಖಲಿಸಲಾಗಿದೆ.

ಯೋಧರು ಯುದ್ಧ ಅಭ್ಯಾಸದಲ್ಲಿ ಭಾಗವಹಿಸಲು ಸೂರತ್ ಗಢಕ್ಕೆ ಬಂದಿದ್ದರು. ಅಭ್ಯಾಸದಲ್ಲಿ ಭಾಗವಹಿಸಿ ವಾಪಸಾಗುತ್ತಿದ್ದ ಮಾರ್ಗದಲ್ಲಿ ಘಟನೆ ನಡೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News