×
Ad

ಪುನರೂರು : 14ನೇ ವರ್ಷದ ಜಲಾಲಿಯ್ಯಾ ರಾತೀಬ್, ಧಾರ್ಮಿಕ ಪ್ರವಚನ ಕಾರ್ಯಕ್ರಮ

Update: 2021-03-25 13:50 IST

ಕಿನ್ನಿಗೋಳಿ: ಇಹಲೋಕದ ಸ್ವಾರ್ಥ ಜೀವನಕ್ಕಿಂತಲೂ, ಪರಲೋಕದ ಶಾಶ್ವತ ಜೀವನದ ಒಳಿತಿಗಾಗಿ ನಮ್ಮನ್ನ ನಾವು ಅರ್ಪಿಸಿಕೊಳ್ಳಬೇಕು ಎಂದು ಖ್ಯಾತ ವಾಗ್ಮಿ, ದ್ಸಿಕ್ರ್ ಇಸ್ಲಾಮಿಕ್ ಅಕಾಡೆಮಿ ಮೂಡಬಿದ್ರಿ ಇದರ ಪ್ರಾಂಶುಪಾಲ ನೌಫಲ್ ಸಖಾಫಿ ಕಳಸ ಹೇಳಿದರು.

ಮೊಹಮ್ಮದೀಯಾ ಜುಮ್ಮಾ ಮಸೀದಿ ಹಾಗೂ ಮುಹ್ಯುದ್ದೀನ್ ಯಂಗ್‍ಮೆನ್ಸ್ ಎಸೋಸಿಯೇಶನ್ ಪುನರೂರು ಇದರ 14ನೇ ವರ್ಷದ ಜಲಾಲಿಯ್ಯಾ ರಾತೀಬ್ ಮಜ್ಲಿಸ್ ಅಂಗವಾಗಿ ನಡೆದ ಧಾರ್ಮಿಕ ಪ್ರವಚನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 

ಮನುಷ್ಯ ಎದುರಿಸುವ ಪ್ರತಿಯೊಂದು ಸಮಸ್ಯೆಗಳಿಗೂ ಕುರ್‍ಆನ್‍ನಲ್ಲಿ ಪರಿಹಾರವಿದೆ. ದಾನ, ಧರ್ಮ ನಮ್ಮನ್ನ ಸದಾ ಕಾಲ ಆಪತ್ತಿನಿಂದ ರಕ್ಷಿಸುತ್ತದೆ. ಅದೆಷ್ಟೋ ಪಾಪಗಳನ್ನು ಮಾಡಿದವನಿಗೂ ಆತನು ಮಾಡಿದ ದಾನದ ಕಾರಣಕ್ಕಾಗಿ ಅಲ್ಲಾಹನು ಕ್ಷಮಿಸಿರುವ ಇತಿಹಾಸ ಚರಿತ್ರೆಯ ಪುಟಗಳಲ್ಲಿವೆ. ಹಾಗಾಗಿ ಸಮಾಜದಲ್ಲಿ ಅಹಂಕಾರ ಪಡದೆ, ಅನ್ಯಾಯವೆಸಗದೇ ಪರೋಪಕಾರಿಯಾಗಿ ಬದುಕೋಣ, ಆ ಮೂಲಕ ಇಹಲೋಕದ ಕ್ಷಣಿಕ ಜೀವನದಲ್ಲಿ ಮಾಡಿದ ಸತ್ಕರ್ಮಕ್ಕೆ ಬದಲಾಗಿ ಪರಲೋಕ ಜೀವನದಲ್ಲಿ ಯಶಸ್ಸು ಪಡೆಯೋಣ ಎಂದರು.

ಎಂಜೆಎಂ ಪುನರೂರು ಮುಅಲ್ಲಿಂ ಸಜ್ಜಾದ್ ಆಲಂ ನೂರಿ ಕಿರಾಅತ್ ಪಠಿಸಿದರು. ಖತೀಬರು ಮೊಹಮ್ಮದ್ ಬಷೀರ್ ಮದನಿ ಉದ್ಘಾಟಿಸಿದರು. ಗೌರವಾಧ್ಯಕ್ಷ ಪಿಎಸ್ ಅಬ್ದುಲ್ ಹಮೀದ್ ಮಿಲನ್ ಸಭಾಧ್ಯಕ್ಷತೆ ವಹಿಸಿದ್ದರು.

ವೇದಿಕೆಯಲ್ಲಿ ಎಂಜೆಎಂ ಪುನರೂರು ಅಧ್ಯಕ್ಷ ಸಿದ್ದೀಕ್ ಪುನರೂರು, ಪ್ರಧಾನ ಕಾರ್ಯದರ್ಶಿ ಶೇಖ್ ಇಬ್ರಾಹಿಂ, ಉಪಾಧ್ಯಕ್ಷ ಪಿಎಸ್ ಮೊಹಮ್ಮದ್ ಇಕ್ಬಾಲ್, ಅಶ್ರಫ್ ರಝಾ ಅಂಜದಿ, ಎಂಜೆಎಂ ಕಿನ್ನಿಗೋಳಿ ಖತೀಬರು ಅಬ್ದುಲ್ ಲತೀಫ್ ಸಖಾಫಿ, ಅಧ್ಯಕ್ಷ ಅಬ್ದುಲ್ ರಹ್ಮಾನ್, ಎಂವೈಎ ಪುನರೂರು ಅಧ್ಯಕ್ಷ ಅಬ್ದುಲ್ ಖಾದರ್ ಅಂಗರಗುಡ್ಡೆ, ಕಾರ್ಯದರ್ಶಿ ಪಿಎಸ್ ಅಫ್ತಾಬ್ ಅಹ್ಮದ್ ಮಿಲನ್,  ಅಬ್ದುಲ್ ರಝಾಕ್ ಪೆರ್ಮುದೆ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News