ಕುಂದಾಪುರ : ಕೊರೋನ ನಿಯಮ ಉಲ್ಲಂಘನೆ; ಜಿಲ್ಲಾಧಿಕಾರಿಯಿಂದ ದಂಡ
ಕುಂದಾಪುರ : ಗುರುವಾರ ಬೆಳಗ್ಗೆ ಕುಂದಾಪುರ ಪೇಟೆಯಲ್ಲಿ ಸಾರ್ವಜನಿಕರು, ವಿದ್ಯಾರ್ಥಿಗಳು, ಆಟೋ ಚಾಲಕರು ಕೊರೋನ ನಿಯಮ ಉಲ್ಲಂಘನೆ ಮಾಡಿ ಮಾಸ್ಕ್ ಹಾಗೂ ಅಂತರವನ್ನು ಕಾಯ್ದುಕೊಳ್ಳದೇ ತಿರುಗಾಡುತ್ತಿದ್ದವರನ್ನು ತಡೆದು ಅವರಿಗೆ ಎಚ್ಚರಿಕೆ ನೀಡಿದರು.
ಅಲ್ಲದೆ ಡಿ. ಸಿ ಅವರ ಆದೇಶ ಮೇರೆಗೆ ಪುರಸಭೆ ವತಿಯಿಂದ ದಂಡ ವಿಧಿಸಲಾಯಿತು.
ಕೆಲವೊಂದು ಅಂಗಡಿಗಳಿಗೆ ದಾಳಿ ಮಾಡಿ ಕೊರೋನ ನಿಯಮ ಉಲ್ಲಂಘನೆ ಮಾಡಿದ ಅಂಗಡಿ ಮಾಲಕರನ್ನು ಹಾಗೂ ನೌಕರರನ್ನು ತರಾಟೆಗೆ ತೆಗೆದುಕೊಂಡು ಅವರಿಗೆ ದಂಡ ವಿಧಿಸಿ ಎಚ್ಚರಿಕೆಯನ್ನು ನೀಡಲಾಯಿತು.
ಉಡುಪಿ ಜಿಲ್ಲೆಯಲ್ಲಿ ಲಾಕ್ ಡೌನ್ ಮಾಡುವ ಪ್ರೆಶ್ನೆಯೇ ಇಲ್ಲ ಎಂದು ಪತ್ರಕರ್ತರ ಪ್ರಶ್ನೆಗೆ ಜಿಲ್ಲಾಧಿಕಾರಿ ಜಗದೀಶ್ ಸ್ಪಷ್ಟನೆ ನೀಡಿದರು. ಶಿಕ್ಷಣ ಸಂಸ್ಥೆಯಲ್ಲಿ ಕೋರೋನ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದು ಕಂಡುಬರುತ್ತದೆ. ಮಣಿಪಾಲದ ಎಂ. ಐ.ಟಿ, ಕುಂಜಾಲು ಹಾಗೂ ಕಾರ್ಕಳದಲ್ಲಿ ಹಲವು ಪ್ರಕರಣಗಳು ಕಂಡು ಕಂಡುಬಂದಿರುತ್ತದೆ. ಅದಕ್ಕಾಗಿ ಸರಕಾರಕ್ಕೆ ಪತ್ರ ಬರೆದಿದ್ದೇನೆ ಸಾಧ್ಯವಾದಷ್ಟು ಆನ್ ಲೈನ್ ಕ್ಲಾಸ್ ಮಾಡಬೇಕು ಇದರಿಂದ ಕೊರೋನ ಇನ್ನೊಬ್ಬರಿಗೆ ಹರಡುವುದನ್ನು ತಡೆಯಬಹುದು. ಅದಕ್ಕಾಗಿ ಶಿಕ್ಷಣ ಸಚಿವರಿಗೂ ಹಾಗೂ ಸರಕಾರಕ್ಕೂ ಮನವಿ ಮಾಡಿದ್ದೇನೆ ಎಂದರು.